Hasanamba Temple Open: ವರ್ಷಕ್ಕೊಮ್ಮೆ ದರ್ಶನ ನೀಡೋ "ಹಾಸನಾಂಬೆ" ಗರ್ಭಗುಡಿ ಬಾಗಿಲು ಓಪನ್!
ಹಾಸನ: ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದ ಶ್ರೀ ಹಾಸನಾಂಬೆ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಮಾತ್ರ ತೆರೆದುಕೊಳ್ಳುವ ಗರ್ಭಗುಡಿ ಬಾಗಿಲು ತೆರೆದಿದೆ. ಈ ವರ್ಷ ಆಶ್ವಿಜ್ ಮಾಸದ ಮೊದಲ ಗುರುವಾರ ಗರ್ಭಗುಡಿ ಬಾಗಿಲು ತೆರೆಯಲಾಗಿದೆ ಮತ್ತು ದರ್ಶನ ಕಾರ್ಯಕ್ರಮ ಅಕ್ಟೋಬರ್ 22ರವರೆಗೆ 15 ದಿನಗಳ ಕಾಲ ನಡೆಯಲಿದೆ. ಸಾರ್ವಜನಿಕರು ನಾಳೆಯಿಂದ ದರ್ಶನಕ್ಕೆ ಅವಕಾಶ ಪಡೆಯಲಿದ್ದಾರೆ.
ಈ ವಿಶೇಷ ಉತ್ಸವವು ಹಾಸನ ಜಾತ್ರೆಯ ಭಾಗವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ಭಕ್ತರಿಗೆ ಅಪೂರ್ವ ದರ್ಶನ ಸೌಭಾಗ್ಯ ನೀಡುತ್ತದೆ.ಹಾಸನಾಂಬೆ ದೇವಸ್ಥಾನವು 12ನೇ ಶತಮಾನದಿಂದಲೂ ತನ್ನ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ.
ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ದರ್ಶನವು ಭಕ್ತರಿಗೆ ಮನಸ್ಸಿನ ಶಾಂತಿ ನೀಡುತ್ತದೆ ಎಂಬ ನಂಬಿಕೆಯಿದೆ. ಬಾಗಿಲು ತೆರೆಯುವ ಮುನ್ನ ದೇವಾಲಯದ ಮುಂದೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಮಯ 12.21ಕ್ಕೆ ವಿದ್ಯುಕ್ತವಾಗಿ ಗರ್ಭಗುಡಿಯ ಬಾಗಿಲು ತೆರೆಯಲಾಯ್ತು. ಇಂದಿನಿಂದ 15 ದಿನಗಳಕಾಲ ದರ್ಶನೋತ್ಸವ ನಡೆಯಲಿದೆ. ಸಾರ್ವಜನಿಕರಿಗೆ ನಾಳೆಯಿಂದ 22ರವೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?