IND vs PAK: ರಾಷ್ಟ್ರಗೀತೆ ಬದಲು ಪಾಪ್ ಸಾಂಗ್: ಮೈದಾನದಲ್ಲೇ ಪಾಕಿಸ್ತಾನಕ್ಕೆ ಭಾರಿ ಮುಖಭಂಗ
ದುಬೈ: ಏಷ್ಯಾಕಪ್ ಕ್ರಿಕೆಟ್‌ನಲ್ಲಿ ನಿನ್ನೆ ನಡೆದ ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣಿಸಿ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದ ಹೈಲೆಟ್ ಎಂದರೆ ನಾಯಕ ಸೂರ್ಯಕುಮಾರ್ ಯಾದವ್ ನೀಡಿದ ಪರೋಕ್ಷ ಸಂದೇಶ.
ಟಾಸ್ ವೇಳೆಯಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಜೊತೆ ಕೈಕುಲುಕದೆ, ಪಂದ್ಯ ಮುಗಿದ ಬಳಿಕವೂ ಪಾಕಿಸ್ತಾನಿ ಆಟಗಾರರೊಂದಿಗೆ ಶೇಕ್‌ಹ್ಯಾಂಡ್ ಮಾಡದೆ ಇಡೀ ತಂಡ ಅಂತರ ಕಾಯ್ದುಕೊಂಡಿತು. ಪಂದ್ಯ ಅಂತ್ಯದಲ್ಲಿ ಸೂರ್ಯ, ಕಾಶ್ಮೀರದ ಪೆಹಲ್ಗಾಮ್ ಸಂತ್ರಸ್ಥರನ್ನು ನೆನೆದು, ಈ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿದರು.
https://twitter.com/ImHvardhan21/status/1967237889747792230
ಟಾಸ್ ಸಮಯದಲ್ಲಿ ನಡೆದ ಘಟನೆ ಪಾಕ್ ತಂಡಕ್ಕೆ ಮತ್ತಷ್ಟು ಮುಖಭಂಗ ತಂದಿತು. ರಾಷ್ಟ್ರಗೀತೆಯ ಸಮಯದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ಕ್ರೀಡಾಂಗಣದಲ್ಲಿ ‘ಜಲೇಬಿ ಬೇಬಿ’ ಹಾಡು ಪ್ಲೇ ಆಗಿತು. ಪಾಕಿಸ್ತಾನಿ ಆಟಗಾರರು ಗೀತೆಯ ನಿರೀಕ್ಷೆಯಲ್ಲಿದ್ದರೆ, ಅಭಿಮಾನಿಗಳ ನಡುವೆ ಹಾಡು ಪ್ರತಿಧ್ವನಿಸಿತು. ಒಂದರ ನಂತರ ಒಂದರಂತೆ ಇಂತಹ ಘಟನೆಗಳಿಂದ ಪಾಕ್ ತಂಡ ಹೀನಾಯ ಸೋಲಿನೊಂದಿಗೆ ಮತ್ತಷ್ಟು ನಾಚಿಕೆ ಅನುಭವಿಸಬೇಕಾಯಿತು.
ನಿಮ್ಮ ಪ್ರತಿಕ್ರಿಯೆ ಏನು?