IPL 2025: ಐಪಿಎಲ್ ಫೈನಲ್ ಮ್ಯಾಚ್ ಯಾವಾಗ!? BCCI ಕೊಟ್ಟ ಬಿಗ್ ಅಪ್ಡೇಟ್ ಇಲ್ಲಿದೆ!

ಮೇ 22, 2025 - 09:06
 0  13
IPL 2025: ಐಪಿಎಲ್ ಫೈನಲ್ ಮ್ಯಾಚ್ ಯಾವಾಗ!? BCCI ಕೊಟ್ಟ ಬಿಗ್ ಅಪ್ಡೇಟ್ ಇಲ್ಲಿದೆ!

ಐಪಿಎಲ್​ ರೋಚಕಘಟ್ಟ ತಲುಪುತ್ತಿದ್ದು, ಯಾರು ಕಪ್ ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಮೂರು ತಂಡಗಳು ಪ್ಲೇ-ಆಫ್ ಪ್ರವೇಶ ಮಾಡಿವೆ. ಗುಜರಾತ್​ ಟೈಟನ್ಸ್, ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್​ ಪ್ಲೇ-ಆಫ್​​ನಲ್ಲಿ ಆಡೋದು ಪಕ್ಕಾ ಆಗಿದೆ. ಇನ್ನು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇ-ಆಫ್ ಪ್ರವೇಶಕ್ಕೆ ಪ್ರಯತ್ನ ಮಾಡ್ತಿದೆ. ಈ ಎರಡು ತಂಡಗಳಲ್ಲಿ ಒಂದು ತಂಡ ಪ್ಲೇ-ಆಫ್​ಗೆ ಅರ್ಹತೆ ಪಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​​ನ ಫೈನಲ್ ಪಂದ್ಯವು ಗುಜರಾತ್​ನ ಅಹ್ಮದಾಬಾದ್​​ನಲ್ಲಿರುವ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಅಂತಾ ಬಿಸಿಸಿಐ ತಿಳಿಸಿದೆ. ಜೊತೆಗೆ ಕ್ವಾಲಿಫೈಯರ್-2 ಪಂದ್ಯ ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಇನ್ನು, ಕ್ವಾಲಿಫೈಯರ್ ಮೊದಲ ಪಂದ್ಯ ಹಾಗೂ ಎಲಿಮಿನೇಟರ್ ಪಂದ್ಯವು ಪಂಜಾಬ್​ನ ಮಲ್ಲನಪುರ ಮೈದಾನದಲ್ಲಿ ನಡೆಸಲು ನಿರ್ಧರಿಸಿದೆ. ಮಲ್ಲನಪುರ ಮೈದಾನವು ಪಂಜಾಬ್​ ಕಿಂಗ್ಸ್​ನ ತವರು ಮೈದಾನವಾಗಿದೆ.

ಮಳೆ ಬರುವ ಮುಂಜಾಗೃತ ಕ್ರಮವಾಗಿ ಪಂದ್ಯ ನಡೆಯುವ ಸ್ಥಳವನ್ನು ಬದಲಾಯಿಸಲಾಗಿದೆ. ಈ ಮೊದಲು ಬಿಸಿಸಿಐ ಒಂದು ಪ್ಲೇ-ಆಫ್ ಪಂದ್ಯ ಹಾಗೂ ಫೈನಲ್ ಮ್ಯಾಚ್​ ಅನ್ನು ಕೋಲ್ಕತ್ತ ಈಡನ್ ಗಾರ್ಡನ್​​ನಲ್ಲಿ ನಡೆಸಲು ನಿರ್ಧರಿಸಿತ್ತು. ಅಲ್ಲದೇ, ಇನ್ನುಳಿದ ಎರಡು ಪಂದ್ಯಗಳನ್ನು ಹೈದರಾಬಾದ್​ನಲ್ಲಿ ನಡೆಸಲು ನಿರ್ಧರಿಸಿತ್ತು. ಇದೀಗ ಹೈದರಾಬಾದ್​ನಲ್ಲಿ ನಡೆಯುವ ಪಂದ್ಯಗಳನ್ನು ಮಲ್ಲನಪುರದಲ್ಲಿ ಹಾಗೂ ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಗುಜರಾತ್​ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಹೊಸ ಅಪ್​ಡೇಟ್ಸ್​ ಹೀಗಿದೆ! 

29-ಮೇ-25 (ಗುರುವಾರ) 7:30 PM: ಕ್ವಾಲಿಫೈಯರ್ 1 (ಮಲ್ಲನಪುರ)
 30-ಮೇ-25 (ಶುಕ್ರವಾರ) – 7:30 PM: ಎಲಿಮಿನೇಟರ್ (ಮಲ್ಲನಪುರ)
 01-ಜೂನ್-25 (ಭಾನುವಾರ) 7:30 PM: ಕ್ವಾಲಿಫೈರ್ 2 (ಅಹ್ಮದಾಬಾದ್)
 03-ಜೂನ್-25 (ಮಂಗಳವಾರ) 7:30 PM: ಫೈನಲ್ (ಅಹ್ಮದಾಬಾದ್)

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow