IPL 2025: ಕೋಲ್ಕತ್ತಾ, ಚೆನ್ನೈ ಮಣಿಸಿದ್ದಾಯ್ತು: RCB ಮುಂದಿನ ಟಾರ್ಗೆಟ್ ಯಾರು?

IPL 2025ರ ಟೂರ್ನಿ ಈಗಾಗಲೇ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಅತ್ಯಂತ ಸ್ಟ್ರಾಂಗ್ ಆಗಿರುವ ಕೋಲ್ಕತ್ತಾ ಹಾಗೂ CSK ತಂಡ ಮಣಿಸಿ ಎರಡು ಗೆಲುವು ಸಾಧಿಸಿದೆ.
ಇದರ ಬೆನ್ನಲ್ಲೇ ಆರ್ಸಿಬಿ ಮುಂದಿನ ಟಾರ್ಗೆಟ್ ಯಾರು ಅಂತ ಯೋಚಿಸ್ತಿದ್ದೀರಾ!? ಎಸ್, ಬೆಂಗಳೂರಿನ ಮುಂದಿನ ಟಾರ್ಗೆಟ್ ಗುಜರಾತ್. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2 ರಂದು ಗುರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಮುಂದಿನ ಮ್ಯಾಚ್ ಆಡಲಿದೆ. ಎಂದಿನಂತೆ ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ. ಗುಜರಾತ್ ಟೈಟನ್ಸ್ ಈಗಾಗಲೇ ಐಪಿಎಲ್ನಲ್ಲಿ ಒಂದು ಪಂದ್ಯಗಳನ್ನ ಆಡಿದೆ. ಮಾರ್ಚ್ 25 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸೋಲನ್ನು ಕಂಡಿದೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಇನ್ನು, ಆರ್ಸಿಬಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನ ಆಡಿದೆ. ಮೊದಲ ಪಂದ್ಯ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಿತ್ತು. ಈ ಪಂದ್ಯವನ್ನು ಆರ್ಸಿಬಿ ಗೆದ್ದುಕೊಂಡಿದೆ. ಇನ್ನು ಶುಕ್ರವಾರ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಭರ್ಜರಿ ಅಂದರೆ 50 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಆರ್ಸಿಬಿ 7 ವಿಕೆಟ್ ಕಳೆದುಕೊಂಡು 196 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಸಿಎಸ್ಕೆ 8 ವಿಕೆಟ್ ಕಳೆದುಕೊಂಡು 146 ರನ್ಗಳಿಸಿ ಸೋಲಿಗೆ ಶರಣಾಯ್ತು. ಆ ಮೂಲಕ ಎರಡು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






