IPL 2025: ತವರಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್'ಗೆ ಹೀನಾಯ ಸೋಲು

ಎಪ್ರಿಲ್ 12, 2025 - 09:11
 0  10
IPL 2025: ತವರಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್'ಗೆ ಹೀನಾಯ ಸೋಲು

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ನ 25ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ ಕೇವಲ 103 ರನ್ ಮಾತ್ರ ಕಲೆಹಾಕಿತು. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 10.1 ಓವರ್ಗಳಲ್ಲಿ ಚೇಸ್ ಮಾಡಿ 8 ವಿಕೆಟ್ಗಳ ಜಯ ಸಾಧಿಸಿದೆ.

ವಿಜಯ್ ಶಂಕರ್ 2 ಫೋರ್, 1 ಸಿಕ್ಸರ್ ಸಮೇತ 29 ಹಾಗೂ ಶುವಂ ದುಬೆ ಅವರ 3 ಬೌಂಡರಿಗಳಿಂದ 31 ರನ್ಗಳನ್ನು ಗಳಿಸಿದರು. ಈ ಇಬ್ಬರು ಬ್ಯಾಟರ್ಗಳನ್ನ ಬಿಟ್ಟರೇ ಉಳಿದವರು ಯಾರು ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಕ್ಯಾಪ್ಟನ್ ಧೋನಿ ಕೂಡ ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದು ಕೇವಲ 1 ರನ್ಗೆ ಔಟ್ ಆದರು. ಹೀಗಾಗಿ ಚೆನ್ನೈ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ 104 ರನ್ಗಳ ಗುರಿ ನೀಡಿತ್ತು.

10.1 ಓವರ್ಗಳಲ್ಲಿ ಕೇವಲ 2 ವಿಕೆಟ್ಗೆ 107 ರನ್ಗಳನ್ನು ಗಳಿಸುವ ಮೂಲಕ ಕೋಲ್ಕತ್ತಾ ತಂಡ ವಿಜಯಶಾಲಿಯಾಯಿತು. ಈ ಮೂಲಕ ಕೆಕೆಆರ್ ತಂಡ 6 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಕಂಡು, ಮೂರರಲ್ಲಿ ಸೋಲುಂಡಿದೆ. ಅದರಂತೆ ಚೆನ್ನೈ ತಂಡ ಕೂಡ 6 ಮ್ಯಾಚ್ಗಳನ್ನು ಆಡಿದ್ದು ಇದರಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದು ಉಳಿದ ಎಲ್ಲ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಹೋಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow