Iran attacks Israel: ಇಸ್ರೇಲ್ ಮೇಲೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಅಟ್ಯಾಕ್! ಪ್ಯಾಲೆಸ್ತೀನ್ ಉಗ್ರರ ಹತ್ಯೆ

ಅಕ್ಟೋಬರ್ 2, 2024 - 12:03
 0  16
Iran attacks Israel: ಇಸ್ರೇಲ್ ಮೇಲೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಅಟ್ಯಾಕ್! ಪ್ಯಾಲೆಸ್ತೀನ್ ಉಗ್ರರ ಹತ್ಯೆ

ಬೈರೂತ್: ನಸ್ರಲ್ಲಾ ಹೊರತುಪಡಿಸಿ, ಇಸ್ರೇಲ್ ಗುಂಪಿನ ಇತರ ಹಿರಿಯ ಕಮಾಂಡರ್‌ಗಳ ಹತ್ಯೆಯನ್ನೂ ಮಾಡಿದೆ. ಇದರಲ್ಲಿ ಹಿಜ್ಬುಲ್ಲಾದ ಕೇಂದ್ರ ಮಂಡಳಿಯ ಉಪ ಮುಖ್ಯಸ್ಥ ನಬಿಲ್ ಕೌಕ್ ಮತ್ತು ಇನ್ನೊಬ್ಬ ಹಿರಿಯ ಕಮಾಂಡರ್ ಅಲಿ ಕರಾಕಿ ಸೇರಿದ್ದಾರೆ. ಕೌಕ್ ಒಂದು ವಾರದ ನಿರಂತರ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಿಜ್ಬುಲ್ಲಾದ ಏಳನೇ ಹಿರಿಯ ಕಮಾಂಡರ್ ಆಗಿದ್ದಾರೆ.

ಹೌದು ಇರಾನ್‌, ಇಸ್ರೇಲ್‌ ಮೇಲೆ ಏಕಕಾಲಕ್ಕೆ ನೂರಾರು ಕ್ಷಿಪಣಿಗಳನ್ನ ಹಾರಿಸಿದೆ. ಇಸ್ರೇಲ್‌ ವಿರುದ್ಧ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದ್ದು, ಇಸ್ರೇಲ್‌ನಾದ್ಯಂತ ಸೈರನ್‌ ಮೊಳಗಿದೆ.

ಟೆಲ್ ಅವೀವ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಇಸ್ರೇಲ್‌ ತನ್ನ ದೇಶದ ನಾಗರಿಕರಿಗೆ ತಿಳಿಸಿದೆ. ಭಾರತೀಯ ಕಾಲಮಾನ ರಾತ್ರಿ 10:08ರ ಸುಮಾರಿಗೆ ಇಸ್ರೇಲ್‌ ರಕ್ಷಣಾಪಡೆಗನ್ನು ಗುರಿಯಾಗಿಸಿ ಇರಾನ್‌ ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ತಿಳಿದುಬಂದಿಲ್ಲ. ಇಸ್ರೇಲ್‌ನ ಪ್ರಸಿದ್ಧ ಐರನ್ ಡೋಮ್ ಮತ್ತು ಆರೋ ರಕ್ಷಣಾ ವ್ಯವಸ್ಥೆಗಳಿಂದ ಕ್ಷಿಪಣಿಗಳನ್ನು ತಡೆಹಿಡಿಯಲು ಮುಂದಾಗಿದೆ. ಆದ್ರೆ ಜೆರುಸಲೇಂ ಮತ್ತು ಇತರೆಡೆಗಳಲ್ಲಿ ಸ್ಫೋಟ ಸಂಭವಿಸಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow