Job Alert: 'ಉದ್ಯೋಗಾಕಾಂಕ್ಷಿ'ಗಳೇ ಗಮನಿಸಿ: ಬರೋಬ್ಬರಿ 461 ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ.!

ಅಕ್ಟೋಬರ್ 8, 2024 - 08:12
 0  14
Job Alert: 'ಉದ್ಯೋಗಾಕಾಂಕ್ಷಿ'ಗಳೇ ಗಮನಿಸಿ: ಬರೋಬ್ಬರಿ 461 ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ.!

ನಿರುದ್ಯೋಗಿಗಳಿಗೆ ಸಿಹಿ ಸಿಕ್ಕಿದ್ದು, ಬರೋಬ್ಬರಿ 461 ಸರ್ಕಾರಿ ಹುದ್ದೆಗಳು ಖಾಲಿ ಇದೆ. 

ಎಸ್ ಕೊಪ್ಪಳದಲ್ಲಿ ಈ ಕೆಲಸ ಇದ್ದು, ಆಸಕ್ತರು ಕೂಡಲೇ ಅಪ್ಲೈ ಮಾಡಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಸಂದರ್ಶನದ ಮೂಲಕ, ದಾಖಲೆ ಪರಿಶೀಲನೆ ನಡೆಸುವ ಮೂಲಕ ಮಾತ್ರ ನೇಮಕ ಮಾಡಿಕೊಳ್ಳಲಿದೆ. 

ಉದ್ಯೋಗ ಇಲಾಖೆ    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ

ಹುದ್ದೆಗಳ ಹೆಸರು:-    ಕಾರ್ಯಕರ್ತೆ, ಸಹಾಯಕಿ
ಒಟ್ಟು ಹುದ್ದೆಗಳ ಸಂಖ್ಯೆ    461

ಅಂಗನವಾಡಿ ಸಹಾಯಕಿ ಹುದ್ದೆಗಳ:- ಸಂಖ್ಯೆ    374

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ಸಂಖ್ಯೆ:-     87

ಅಂಗನವಾಡಿ ಹುದ್ದೆಗಳಿಗೆ ಅರ್ಹತೆಗಳು:- 

ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ.
ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸ್.
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ದಾಟಿರಬೇಕು.
ಗರಿಷ್ಠ 35 ವರ್ಷ ವಯಸ್ಸು ದಾಟಿರಬಾರದು.
ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಅನ್ವಯವಾಗಲಿವೆ.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವರ್ಗಾವಾರು ವಯಸ್ಸಿನ ಸಡಿಲಿಕೆ ಅನ್ವಯವಾಗಲಿವೆ

ಅಂಗನವಾಡಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ
ವೆಬ್‌ ವಿಳಾಸ "karnemakaone.kar.nic.in/abcd/ApplicationForm_JA_org.aspx" ಕ್ಕೆ ಭೇಟಿ ನೀಡಿ.
ಹುದ್ದೆ ಬಯಸುವ ಜಿಲ್ಲೆ ಕೊಪ್ಪಳ >> ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) >> ಅಧಿಸೂಚನೆ ಸಂಖ್ಯೆ >> ಹುದ್ದೆ ಆಯ್ಕೆ ಮಾಡಿ.
ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿ.
ಆನ್‌ಲೈನ್‌ ಅರ್ಜಿ ನಮೂನೆ ವೆಬ್‌ಪೇಜ್‌ ತೆರೆಯುತ್ತದೆ.
ಕೇಳಲಾದ ಸಂಪೂರ್ಣ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್‌ ಸಲ್ಲಿಸಿ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow