Job Offer: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್..!
ಬ್ಯಾಂಕಿಂಗ್ ವೃತ್ತಿ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಬ್ಯಾಂಕ್ ಆಫ್ ಮಹಾರಾಷ್ಟ್ರ 500 ಜನರಲ್ ಆಫೀಸರ್ (ಸ್ಕೇಲ್ II) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಗಸ್ಟ್ 30, 2025 ರವರೆಗೆ ಮುಂದುವರಿಯಲಿದೆ.
ಅರ್ಹತೆ ಹಾಗೂ ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.60 ಅಂಕಗಳೊಂದಿಗೆ ಪದವೀಧರರಾಗಿರಬೇಕು. SC/ST/OBC/PwBD ಅಭ್ಯರ್ಥಿಗಳಿಗೆ ಶೇ.55 ಅಂಕಗಳ ಮಿತಿಯನ್ನು ಅನುಮತಿಸಲಾಗಿದೆ. CA, CMA, CFA, ICWA, JAIIB ಅಥವಾ CAIIB ಅರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಅದಷ್ಟೇ ಅಲ್ಲದೆ, ಅಭ್ಯರ್ಥಿಯು ಯಾವುದೇ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಕ್ರೆಡಿಟ್ ಅಥವಾ ಶಾಖೆ ನಿರ್ವಹಣೆಯಂತಹ ಭೂಮಿಕೆಯಲ್ಲಿ ಅನುಭವ ಹೊಂದಿರುವವರು ಹೆಚ್ಚಿನ ಶ್ರೇಯಸ್ಕರರಾಗಲಿದ್ದಾರೆ.
ವಯೋಮಿತಿ: 22 ರಿಂದ 35 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಗಳಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
1. ಅಧಿಕೃತ ವೆಬ್ಸೈಟ್ bankofmaharashtra.in ಗೆ ಭೇಟಿ ನೀಡಿ.
2. "Recruitment" ವಿಭಾಗದಲ್ಲಿ "Generalist Officer Scale II – Project 2025-26" ಆಯ್ಕೆಮಾಡಿ.
3. ಹೊಸ ನೋಂದಣಿಯನ್ನು ಮಾಡಿ, ಫೋಟೋ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
4. ಅರ್ಜಿ ಶುಲ್ಕ ಪಾವತಿಸಿ, ಫಾರ್ಮ್ ಸಲ್ಲಿಸಿ.
ಅರ್ಜಿ ಶುಲ್ಕ:
· ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ – ₹1,180
· SC/ST/PwBD ಅಭ್ಯರ್ಥಿಗಳಿಗೆ – ₹118
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?