Job vacancy: ಪದವಿ ಆಗಿದ್ಯಾ!? ಮೆಟ್ರೋದಲ್ಲಿದೆ ಉದ್ಯೋಗ, ಲಕ್ಷ-ಲಕ್ಷ ಸಂಬಳ!

ನವೆಂಬರ್ 28, 2024 - 08:08
 0  9
Job vacancy: ಪದವಿ ಆಗಿದ್ಯಾ!? ಮೆಟ್ರೋದಲ್ಲಿದೆ ಉದ್ಯೋಗ, ಲಕ್ಷ-ಲಕ್ಷ ಸಂಬಳ!

ಪದವಿ ಮುಗಿಸಿ ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗ ಯುವಕ, ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ. ಜಸ್ಟ್ ಪದವಿ ಪಾಸ್ ಮಾಡಿದವರಿಗೆ ಸಿಗಲಿದೆ ಮೆಟ್ರೋದಲ್ಲಿ ಉದ್ಯೋಗ. ಅದು ಲಕ್ಷ- ಲಕ್ಷ ಸಂಬಳ ಎನ್ನೋದು ಮತ್ತೊಂದು ವಿಶೇಷ. 

ಉತ್ತರಪ್ರದೇಶದ ನೋಯ್ಡಾ ಮೆಟ್ರೋ ರೈಲು ಕಾರ್ಪೊರೇಷನ್​ನಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಈ ಸಂಬಂಧ ನುರಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಇದೊಂದು ಸುವರ್ಣಾವಕಾಶ ಆಗಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ಜನರಲ್ ಮ್ಯಾನೇಜರ್ ಪೋಸ್ಟ್ ಖಾಲಿ ಇದ್ದು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎನ್ನುವ ಅಭ್ಯರ್ಥಿಗೆ 56 ವರ್ಷಗಳು ಮೀರಿರಬಾರದು. ಇದರ ಜೊತೆಗೆ ಎಲೆಕ್ಟ್ರಿಕಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಶನ್ ಇದರಲ್ಲಿ ಯಾವುದಾದರೂ ಒಂದರಲ್ಲಿ ಪದವಿ ಪಡೆದಿರಬೇಕು. ಸರ್ಕಾರದಿಂದ ಮಾನ್ಯತಾ ಪಡೆದ ಸಂಸ್ಥೆಯಿಂದ ಪದವಿ ಸ್ವೀಕರಿಸಿರಬೇಕು. ಅಭ್ಯರ್ಥಿಗಳು ತಮ್ಮ ಸೂಕ್ತ ಕ್ಷೇತ್ರದಲ್ಲಿ ಕನಿಷ್ಠ 17 ವರ್ಷಗಳ ಅನುಭವವನ್ನು ಹೊಂದಿರಬೇಕು.

ತಿಂಗಳ ಸಂಬಳ ವಿಚಾರಕ್ಕೆ ಬಂದರೆ 1,20,000 ದಿಂದ 2,80,000 ರೂಪಾಯಿ ನೀಡಲಾಗುತ್ತದೆ. ಈಗಾಗಲೇ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದ್ದು ಕೊನೆ ದಿನಾಂಕದ ಒಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯ ಆಯ್ಕೆಯನ್ನು ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಮಾಡಲಾಗುತ್ತದೆ.

ಪ್ರಮುಖ ಲಿಂಕ್-

General Manager/ Projects,
Finance and HR,
Noida Metro Rail Corporation Limited Block III,
3rd Floor, Ganga Shopping Complex Sector 29,
Noida- 201301, Distt. Gautam Budh Nagar, UP

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ– 12 ಡಿಸೆಂಬರ್ 2024

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow