Karnataka Rains: ನಿರಂತರ ಮಳೆಗೆ ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ: ಭಾರಿ ಮಳೆಗೆ ರಾಜ್ಯದಲ್ಲಿ 4 ಸಾವು

ಮೇ 20, 2025 - 09:57
 0  18
Karnataka Rains: ನಿರಂತರ ಮಳೆಗೆ ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ: ಭಾರಿ ಮಳೆಗೆ ರಾಜ್ಯದಲ್ಲಿ 4 ಸಾವು

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಸ್ತೆಗಳ ಇಕ್ಕೆಲಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಹೈರಾಣಾದರೆ, ಮನೆಗಳಿಗೆ ನುಗ್ಗಿರುವ ನೀರು ಹೊರಹಾಕಲು ನಾಗರಿಕರು ವಿವಿಧ ಕಸರತ್ತುಗಳನ್ನು ನಡೆಸಿದ್ದಾರೆ. ಮಧ್ಯೆ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದರು.

 ಇದೀಗಭಾರಿ ಮಳೆಯಿಂದ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೂರು ಸಾವು ಸಂಭವಿಸಿದ್ದು, ಮಳೆ ನೀರಿನಿಂದ ಬೇಸ್ಮೆಂಟ್ನಲ್ಲಿ ಸಿಲುಕಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರಿಗೆ ಯೆಲ್ಲೋ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ 2 ಕಡೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲನೆ ಮಾಡಿದ್ದಾರೆ. ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ಯಾರಿಗೆ ಪರಿಹಾರ ಕೊಡಬೇಕೋ ಅವರಿಗೆ ಕೊಡುತ್ತೇವೆ. ಉಳಿದುಕೊಳ್ಳಲು ಜಾಗದ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow