Katrina Kaif: ತಾಯಿಯಾಗ್ತಿದ್ದಾರೆ ಬಾಲಿವುಡ್ ಬೆಡಗಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರೀನಾ ಕೈಫ್-ವಿಕ್ಕಿ ಕೌಶಲ್

ಸೆಪ್ಟೆಂಬರ್ 23, 2025 - 20:13
 0  14
Katrina Kaif: ತಾಯಿಯಾಗ್ತಿದ್ದಾರೆ ಬಾಲಿವುಡ್ ಬೆಡಗಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರೀನಾ ಕೈಫ್-ವಿಕ್ಕಿ ಕೌಶಲ್

ಮುಂಬೈ: ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ (Katrina Kaif) ತಾಯಿಯಾಗುತ್ತಿರುವ ಕುರಿತು ಹಲವಾರು ಸುದ್ದಿಗಳು ಹರಿದಾಡುತ್ತಿದ್ದು, ವದಂತಿಗೆ ಈಗ ತೆರೆ ಬಿದ್ದಿದೆ. ತಮ್ಮ ಗರ್ಭಿಣಿತ್ವವನ್ನು ಕತ್ರಿನಾ ಖಚಿತಪಡಿಸಿದ್ದಾರೆ. ಸಿನಿಮಾ ನಟಿ ಕತ್ರಿನಾ ಕೈಫ್ ಪ್ರೆಗ್ನೆನ್ಸಿಯಲ್ಲಿದ್ದು, ಮಗುವಿನ ನಿರೀಕ್ಷೆಯಲ್ಲಿರುವುದು ಅಧಿಕೃತವಾಗಿ ಘೋಷಿಸಲಾಗಿದೆ.

ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು 2021 ರಲ್ಲಿ ವಿವಾಹವಾದರು. ಕತ್ರಿನಾ ಕೈಫ್, ವಿಕ್ಕಿ ಕೌಶಲ್​​ಗಿಂತಲೂ ಏಳು ವರ್ಷ ದೊಡ್ಡವರು. ವಯಸ್ಸಿನ ಅಂತರವನ್ನು ನಿರ್ಲಕ್ಷಿಸಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರುಗಳು ಮದುವೆಯಾದರು. ಮದುವೆಯಾಗಿ ನಾಲ್ಕು ವರ್ಷದ ಬಳಿಕ ಈಗ ದಂಪತಿ ಪೋಷಕರಾಗುತ್ತಿದ್ದಾರೆ.

ನಟಿ ಕತ್ರಿನಾ ಕೈಫ್ ಕೆಲ ತಿಂಗಳ ಹಿಂದಷ್ಟೆ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು. ಸಂತಾನ ಭಾಗ್ಯಕ್ಕಾಗಿ ಅವರು ವಿಶೇಷ ಪೂಜೆ ಮಾಡಿಸಿದ್ದರು ಎನ್ನಲಾಗಿತ್ತು. ಅದರಂತೆ ಈಗ ಕತ್ರಿನಾ ಕೈಫ್ ಗರ್ಭಿಣಿ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಮ್ಮ ಹಾಗೂ ಪತಿ ವಿಕ್ಕಿ ಕೌಶಲ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕತ್ರಿನಾ ಕೈಫ್, ‘ನಮ್ಮ ಜೀವನದ ಅತ್ಯುತ್ತಮ ಅಧ್ಯಾಯಯದ ಆರಂಭದಲ್ಲಿ ನಾವಿದ್ದೇವೆ. ಸಮಯದಲ್ಲಿ ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆಎಂದು ಕತ್ರಿನಾ ಬರೆದುಕೊಂಡಿದ್ದಾರೆ.

ಕತ್ರಿನಾ ಅವರ ಇನ್​​ಸ್ಟಾಗ್ರಾಂ ಪೋಸ್ಟ್​​ಗೆ ನಟಿ ಮೃಣಾಲ್ ಠಾಕೂರ್, ನೇಹಾ ದೂಪಿಯಾ, ಹರ್ಷಿಕಾ ಪೂಣಚ್ಚ, ಸೋನಂ ಕಪೂರ್, ರಕುಲ್ ಪ್ರೀತ್ ಸಿಂಗ್, ಜಾನ್ಹವಿ ಕಪೂರ್ ಇನ್ನೂ ಹಲವಾರು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow