Kolkata Doctor Murder Case: ‘ಖಾಸಗಿ ಅಂಗಕ್ಕೆ ಹೊಡೆದು ಗಲ್ಲಿಗೇರಿಸಿ’; ಚಹಲ್​ ಪೋಸ್ಟ್​.

ಆಗಸ್ಟ್ 22, 2024 - 13:45
 0  8
Kolkata Doctor Murder Case: ‘ಖಾಸಗಿ ಅಂಗಕ್ಕೆ ಹೊಡೆದು ಗಲ್ಲಿಗೇರಿಸಿ’;  ಚಹಲ್​ ಪೋಸ್ಟ್​.
FOCUS KARNATAKA Chahal

Kolkata Doctor Murder Case: ‘ಖಾಸಗಿ ಅಂಗಕ್ಕೆ ಹೊಡೆದು ಗಲ್ಲಿಗೇರಿಸಿ’;  ಚಹಲ್​ ಪೋಸ್ಟ್​.

ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ(Kolkata Doctor Murder Case) ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಈಗಾಗಲೇ ಹಲವು ಕ್ರಿಕೆಟಿಗರು ಮತ್ತು ಸಿನಿಮಾ ನಟ-ನಟಿಯರು ಒತ್ತಾಯಿಸಿದ್ದಾರೆ. ಇದೀಗ ಟೀಮ್​ ಇಂಡಿಯಾದ ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal)​ ಕೂಡ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ.


ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿರುವ ಚಹಲ್​, ‘ಈ ಪ್ರಕರಣದ ಆರೋಪಿಯ ಕಾಲನ್ನು 90 ಡಿಗ್ರಿಗಳಲ್ಲಿ ಮುರಿಯಬೇಕು. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸುವಂತೆ ಮಾಡಬೇಕು. ಬಳಿಕ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದರು. ಆಕ್ರೋಶಭರಿತ ಪೋಸ್ಟ್​ನಿಂದ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ ಎಂಬ ಭಯದಿಂದ ಚಹಲ್​ ತಾವು ಪೋಸ್ಟ್​ ಮಾಡಿದ ಒಂದು ಗಂಟೆ ಬಳಿಕ ಈ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ. ಆದರೂ ಕೆಲ ನೆಟ್ಟಿಗರು ಈ ಪೋಸ್ಟ್​ನ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಈ ಪೋಸ್ಟ್​ ಇದೀಗ ವೈರಲ್​ ಆಗುತ್ತಿದೆ. ಚಹಲ್ ಅವರ ಈ ಪೋಸ್ಟ್​ಗೆ ಹಲವರು ಬೆಂಬಲ ಸೂಚಿಸಿದ್ದಾರೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕೂಡ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಬುಧವಾರ ಗಂಗೂಲಿ ಅವರ ಪತ್ನಿ ಡೊನ್ನಾ ಅವರ ನೃತ್ಯ ಶಾಲೆ ದೀಕ್ಷಾ ಮಂಜರಿಯಿಂದ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಇದರಲ್ಲಿ ಗಂಗೂಲಿ ಕೂಡ ಪಾಲ್ಗೊಂಡಿದ್ದರು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow