Mallikarjun Kharge: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು ಕೊಟ್ಟ ಖರ್ಗೆ! ಎಐಸಿಸಿ ಅಧ್ಯಕ್ಷ ಹೇಳಿದ್ದೇನು..?

ಫೆಬ್ರವರಿ 12, 2025 - 14:00
 0  18
Mallikarjun Kharge: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು ಕೊಟ್ಟ ಖರ್ಗೆ! ಎಐಸಿಸಿ ಅಧ್ಯಕ್ಷ ಹೇಳಿದ್ದೇನು..?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ರಾಜಕೀಯ ಗರಿಗೆದರಿದೆ. ಕಳೆದ ಆರು ತಿಂಗಳಿನಿಂದ ಸಿಎಂ ಬದಲಾವಣೆ ಚರ್ಚೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಹೈಕಮಾಂಡ್‌ ಎಚ್ಚರಿಕೆ ನೀಡಿದ ಬಳಿಕ ಕೊಂಚ ಮಟ್ಟಿಗೆ ಸೈಲೆಂಟ್‌ ಆಗಿದ್ದ ಸಚಿವರು ಮತ್ತೆ ದೆಹಲಿ ಯಾತ್ರೆ ಮಾಡೋ ಮೂಲಕ ಈ ಚರ್ಚೆ ಮತ್ತೆ ಪುಷ್ಠಿ ಕೊಟ್ಟಿದ್ದಾರೆ. 

ಅದಲ್ಲದೆ ಅಧ್ಯಕ್ಷರ ಬದಲಾವಣೆ ಬಗ್ಗೆ ಕಾಂಗ್ರೆಸ್​​ ನಾಯಕರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ವಿಚಾರ ಚರ್ಚೆಯಲ್ಲಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ದಿನಗಳು ಹತ್ತಿರವಾದಂತೆ ಕಾಣುತ್ತಿವೆ. ಈ ಬಗ್ಗೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸುಳಿವು ನೀಡಿದ್ದಾರೆ.

 ಒಡಿಶಾದಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತೆ. ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಆಗಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಬದಲಾವಣೆ. 8 ದಿನಗಳಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತೆ ಎಂದು ಹೇಳಿದರು.

ಮೋದಿ ಅಮೆರಿಕ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಮೊದಲು ಜೈಶಂಕರ ಇನ್ನಿತರರು ಹೋಗಿದ್ದಾರೆ ಈಗ ಆಹ್ವಾನ ಬಂದ ಮೇಲೆ ಮೋದಿ ಹೋಗುತ್ತಿದ್ದಾರೆ. ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ ಫೋನ್​ನಲ್ಲೇ ಹೇಳಬೇಕಿತ್ತು ನಮ್ಮ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್ ಫ್ಲೈಟನಲ್ಲಿ ಕಳುಹಿಸಬೇಡಿ ನಿಮ್ಮ ಸ್ವಂತ ಪ್ಯಾಸೆಂಜರ್ ಫ್ಲೈಟನಲ್ಲಿ ಕಳಿಸಿ ಎಂದು. ಟ್ರಂಪ್ ಕ್ಲೋಸ್ ಇದ್ದಾರೆ, ಫ್ರೆಂಡ್ ಇದ್ದಾರೆ ಅಂತೆಲ್ಲಾ ಹೇಳಿಕೊಳ್ತಿರಿ. ಅವರು ನಿಮ್ಮ ಫ್ರೆಂಡ್ ಇರಬಹುದು, ನಮ್ಮ ದೇಶದ ಫ್ರೆಂಡ್ ಇರಬೇಕಲ್ವಾ? ನಿಮ್ಮ ಫ್ರೆಂಡ್ ಇದ್ದವರು ಅದೇ ಕಾಳಜಿ ದೇಶದ ಬಗ್ಗೆ ವಹಿಸ್ತಾರೆ ಅಂತಲ್ಲ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow