Mamta Kulkarni: ಮಹಾಕುಂಭಮೇಳದಲ್ಲಿ ಸನ್ಯಾಸಿಯಾದ ಬಾಲಿವುಡ್ ನಟಿ ಮಮತಾ ಕುಲಕರ್ಣಿ..!

90ರ ದಶಕದ ಬಾಲಿವುಡ್ ಸ್ಟಾರ್ ನಟಿಗಳ ಲಿಸ್ಟ್ನಲ್ಲಿ ನಟಿ ಮಮತಾ ಕುಲಕರ್ಣಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದ್ದರು . 'ಆಶಿಕ್ ಆವರಾ' 'ಕರಣ್-ಅರ್ಜುನ್' ನಂತಹ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ದಿಟ್ಟ ಮತ್ತು ಮನಮೋಹಕ ನಟಿ ಮಮತಾ. ಇದೀಗ ಈ ನಟಿ ಮಹಾಕುಂಭದಲ್ಲಿ ನಟಿಯಾಗಿ ನಿವೃತ್ತಿಯಾಗಿ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ.
ಏಪ್ರಿಲ್ 20, 1972ರಂದು ಮುಂಬೈನ ಮರಾಠಿ ಕುಟುಂಬದಲ್ಲಿ ಜನಿಸಿದ ಮಮತಾ ಅವರಿಗೆ ಮಿಥಿಲಾ ಮತ್ತು ಮೋಲಿನಾ ಎಂಬ ಇಬ್ಬರು ಸಹೋದರಿಯರಿದ್ದಾರೆ. ಮಮತಾ ಕುಲಕರ್ಣಿ ಅವರು ಚಿತ್ರಗಳಿಗಿಂತ ವಿವಾದಗಳಿಂದಾಗಿ ಹೆಚ್ಚು ನೆನಪಿನಲ್ಲಿ ಉಳಿದಿದವರು.
ಸನ್ಯಾಸ ದೀಕ್ಷೆ ಪಡೆದು ಮಮತಾ ಕುಲಕರ್ಣಿ ಹೊಸ ಹೆಸರನ್ನೂ ಇಟ್ಟಿದ್ದಾರೆ. ಆಕೆ ಇವರು ಶ್ರೀ ಯಮಾಯಿ ಮಮತಾ ನಂದಗಿರಿ ಮಹಾಮಂಡಲೇಶ್ವರಿಯಾಗಿದ್ದಾರೆ. ಮಹಾಮಂಡಳೇಶ್ವರನಾದ ನಂತರ ಕಳೆದ 25 ವರ್ಷಗಳಿಂದ ಸನ್ಯಾಸಿಯಾಗುವ ಹಾದಿಯಲ್ಲಿದ್ದು ಇಲ್ಲಿಗೆ ತಲುಪಲು ನಾನಾ ಪರೀಕ್ಷೆಗಳನ್ನು ಮಾಡಿ ಉತ್ತೀರ್ಣಳಾಗಿದ್ದೇನೆ ಎಂದರು.
ರಾಜ್ ಕುಮಾರ್, ಸಲ್ಮಾನ್ ಖಾನ್, ಗೋವಿಂದ, ಶಾರುಖ್ ಖಾನ್, ನಾನಾ ಪಾಟೇಕರ್ ಮತ್ತು ಸೈಫ್ ಅಲಿ ಖಾನ್ ಸೇರಿದಂತೆ ಹಲವು ದೊಡ್ಡ ಖ್ಯಾತನಾಮರ ಜೊತೆ ಕೆಲಸ ಮಾಡಿದ್ದ ಮಮತಾ ಕುಲಕರ್ಣಿ 2000ನೇ ಇಸವಿಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅವರು ಭಾರತವನ್ನು ತೊರೆದರು. 2017ರಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. 2000 ಕೋಟಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ ಬಳಿಕ ಈ ನಟಿ ದೇಶವನ್ನೇ ಬಿಟ್ಟು ಹೋದ್ರು. 25 ವರ್ಷಗಳ ನಂತರ ಅವರು ಭಾರತಕ್ಕೆ ಮರಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






