Mothers Day Wishes: ಅಮ್ಮ ಎಂದರೆ ಸಂಜೀವಿನಿ: ಇಲ್ಲಿದೆ ತಾಯಂದಿರ ದಿನದ ಶುಭಾಶಯಗಳು

ಅಮ್ಮ ಎನ್ನುವ ಎರಡಕ್ಷರಕ್ಕೆ ಸೀಮಿತವಲ್ಲ. ಅಮ್ಮ ಎಂದರೆ ಪ್ರೀತಿ, ವಾತ್ಸಲ್ಯ, ಮಮತೆಯ ಪ್ರತಿರೂಪ. ತ್ಯಾಗಕ್ಕೆ ಮತ್ತೊಂದು ಪದವೇ ತಾಯಿ. ತಾಯಿ ಪ್ರೀತಿ ಇಲ್ಲದವರು ನಿಜವಾಗಲೂ ಬಡವರೇ. ಪ್ರತಿ ದಿನವೂ ತಾಯಿ ಜೊತೆ ವಿಶೇಷವಾದ ಕ್ಷಣಗಳೇ ಇರುತ್ತವೆ. ಆದರೂ ವರ್ಷಕ್ಕೊಮ್ಮೆ ತಾಯಂದಿರ ದಿನ ಎಂದು ಗುರುತಿಸಿ ಅವರ ದಿನವನ್ನಾಗಿ ಆಚರಿಸುವುದು ಪ್ರಪಂಚದಾದ್ಯಂತ ವಾಡಿಕೆಯಲ್ಲಿದೆ.
ನಿಮ್ಮ ತಾಯಂದಿರೊಂದಿಗೆ ಸಮಯ ಕಳೆಯುವ ಮೂಲಕ ಮತ್ತು ಸುಂದರವಾದ ಶುಭಾಶಯಗಳೊಂದಿಗೆ ಅವರನ್ನು ಸ್ವಾಗತಿಸುವ ಮೂಲಕ ಈ ದಿನದಂದು ಅವರಿಗೆ ವಿಶೇಷ ಭಾವನೆ ಮೂಡಿಸಿ. ನಿಮ್ಮ ತಾಯಿಗೆ ಕೆಲವು ಶುಭ ಹಾರೈಕೆಗಳು ಮತ್ತು ಸಂದೇಶಗಳು ಇಲ್ಲಿವೆ.
ವಿಶ್ವದ ಅತ್ಯಂತ ಅದ್ಭುತ ತಾಯಿಗೆ ತಾಯಂದಿರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ, ಕಾಳಜಿ ಮತ್ತು ಬೆಂಬಲ ಎಲ್ಲವೂ ನನಗೆ ಸರ್ವಸ್ವವಾಗಿದೆ. ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇದ್ದದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ಅಮ್ಮ.
ಸುಂದರ, ಸ್ಟ್ರಾಂಗ್ ಮತ್ತು ಸ್ನೇಹ ಜೀವಿ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಕೊನೆಯಿಲ್ಲದ ಪ್ರೀತಿ ಮತ್ತು ಸಮರ್ಪಣೆಯಿಂದ ನೀವು ಪ್ರತಿದಿನ ನನಗೆ ಸ್ಫೂರ್ತಿ ನೀಡುತ್ತೀರಿ. ಅಂತಹ ಅದ್ಭುತ ರೋಲ್ ಮಾಡೆಲ್ (role model) ಆಗಿದ್ದಕ್ಕಾಗಿ ಧನ್ಯವಾದಗಳು ಅಮ್ಮ.
ನನ್ನನ್ನು ಬೆಳೆಸಲು ತುಂಬಾ ತ್ಯಾಗ ಮಾಡಿದ ಮಹಿಳೆಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಪ್ರೀತಿ ಇಂದು ನಾನು ಏನಾಗಿದ್ದೇನೊ ಅದಕ್ಕೆ ಕಾರಣ. ಎಲ್ಲದಕ್ಕೂ ಧನ್ಯವಾದಗಳು, ಅಮ್ಮ. ನಿಮ್ಮ ದಿನವು ಸಂತೋಷ ಮತ್ತು ಸಂಭ್ರಮದಿಂದ ಕೂಡಿರಲಿ ಎಂದು ನಾನು ಭಾವಿಸುತ್ತೇನೆ.
ವರ್ಲ್ಡ್ ಬೆಸ್ಟ್ ಅಮ್ಮನಿಗೆ, ತಾಯಂದಿರ ದಿನದ ಶುಭಾಶಯಗಳು! ನಿಮ್ಮ ನಿಷ್ಕಲ್ಮಶ ಪ್ರೀತಿ ಮತ್ತು ನಿಸ್ವಾರ್ಥತೆ ನಿಮ್ಮನ್ನು ನಿಜವಾಗಿಯೂ ಅಸಾಧಾರಣರನ್ನಾಗಿ ಮಾಡುತ್ತದೆ. ನನ್ನ ಜೀವನದಲ್ಲಿ ನಿಮ್ಮನ್ನು ತಾಯಿಯಾಗಿ ಪಡೆಯೋದಕ್ಕೆ ನಾನು ಕೃತಜ್ಞನಾಗಿದ್ದೇನೆ.
ತಾಯಂದಿರ ದಿನದಂದು ನಿಮಗೆ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ, ಅಮ್ಮ. ನೀವು ನನ್ನ ಮಾರ್ಗದರ್ಶಕರು, ನನ್ನ ಶಕ್ತಿಯ ಮೂಲ ಮತ್ತು ನನ್ನ ಅತಿದೊಡ್ಡ ಚಿಯರ್ ಲೀಡರ್. ನಿಮ್ಮನ್ನು ನನ್ನ ತಾಯಿ ಎಂದು ಕರೆಯಲು ನಾನು ಹೆಮ್ಮೆಪಡುತ್ತೇವೆ.
ಈ ತಾಯಂದಿರ ದಿನದಂದು, ನಮ್ಮ ಕುಟುಂಬಕ್ಕಾಗಿ ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ಥ್ಯಾಂಕ್ಸ್ ಹೇಳೊದಕ್ಕೆ ಬಯಸುತ್ತೇನೆ. ನಿಮ್ಮ ಪ್ರೀತಿಗೆ ಮಿತಿಯಿಲ್ಲ, ಮತ್ತು ನಿಮ್ಮನ್ನು ನನ್ನ ತಾಯಿಯಾಗಿ ಪಡೆದ ನಾನು ಅದೃಷ್ಟಶಾಲಿ. ನಿಮ್ಮ ದಿನ ಹ್ಯಾಪಿಯಾಗಿರಲಿ.
ನಿಮ್ಮ ಪ್ರತಿಕ್ರಿಯೆ ಏನು?






