ನಮ್ಮ ಮೆಟ್ರೋದಿಂದ ಭರ್ಜರಿ ಗುಡ್ ನ್ಯೂಸ್: ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರಿನಲ್ಲಿ ಕೈತುಂಬಾ ಸಂಬಳ ಸಿಗುವ ಜಾಬ್ ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್. ತನ್ನಲ್ಲಿ ಖಾಲಿ ಇರುವ ನೂರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನಮ್ಮ ಮೆಟ್ರೋ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರಿನಲ್ಲೇ ಉದ್ಯೋಗ ಬೇಕು ಎನ್ನುವವರಿಗೆ ಇದು ಅತ್ಯಂತ ಉತ್ತಮವಾದ ಅವಕಾಶ ಆಗಿದೆ. ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಉದ್ಯೋಗದ ಹೆಸರು, ಎಷ್ಟು ಹುದ್ದೆಗಳು
ನಿರ್ವಾಹಕರು (Maintainer)
ಒಟ್ಟು ಉದ್ಯೋಗಗಳು- 150
ಕೆಲಸ ಮಾಡುವ ಸ್ಥಳ- ಬೆಂಗಳೂರು
ವಿದ್ಯಾರ್ಹತೆ ಏನು ಕೇಳಲಾಗಿದೆ?
10ನೇ ತರಗತಿ ಜೊತೆಗೆ ಐಟಿಐ ಪಾಸ್ ಆಗಿರಬೇಕು
(ಟೆಕ್ನಿಕಲ್ ಟ್ರೇಡ್ಗಳು- ಎಲೆಕ್ಟ್ರಿಶಿಯನ್, ಎನ್ಸ್ಟ್ರುಮೆಂಟೇಷನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೈಯರ್ಮೆನ್, ಫಿಟ್ಟರ್, ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್, ಮೆಕ್ಯಾನಿಕ್-ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ಮೇಂಟೆನನ್ಸ್, ಮೆಕ್ಯಾನಿಕಲ್ ಕಂಮ್ಯುನಿಕೇಷನ್, ಮೆಕ್ಯಾನಿಕ್ ಮೆಕಾಟ್ರಾನಿಕ್ಸ್ ಅಥವಾ ಎನ್ಸಿವಿಟಿ, ಎನ್ಸಿಟಿವಿಟಿ, ಎನ್ಎಸಿ)
ಮಾಸಿಕ ವೇತನ ಶ್ರೇಣಿ ಹೇಗಿದೆ?
25,000 ದಿಂದ 59,060 ರೂಪಾಯಿಗಳು
ವಯಸ್ಸಿನ ಮಿತಿ ಎಷ್ಟು?
50 ವರ್ಷದ ಒಳಗಿನವರಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ
100 ಅಂಕಗಳಿಗೆ ಪರೀಕ್ಷೆ
ಮೆಡಿಕಲ್ ಫಿಟ್ನೆಸ್ ಪರೀಕ್ಷೆ
ಹುದ್ದೆಗೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 23 ಏಪ್ರಿಲ್
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 22 ಮೇ
ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳುವ ದಿನಾಂಕ- 27 ಮೇ
ಅರ್ಜಿ ಸಲ್ಲಿಕೆಗೆ ವೆಬ್ಸೈಟ್- https://recruitp.bmrc.co.in/
ಬಿಎಂಆರ್ಸಿಎಲ್ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ, ಅಭ್ಯರ್ಥಿಗಳು ಕಂಪ್ಯೂಟರ್ನಲ್ಲಿನ ಪ್ರಿಂಟ್ಔಟ್ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಇತ್ತೀಚಿನ ನಿಮ್ಮ ಪಾಸ್ಫೋಟೋ ಅಂಟಿಸಿ ಮತ್ತು ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಎಲ್ಲಾ ದಾಖಲೆಗಳ ಲಗತ್ತಿಸಿ ಅದನ್ನು ಸೆಲ್ಫ್ ಅಟೆಸ್ಟೆಡ್ ಮಾಡಿ ಕೆಳಗೆ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ
The General Manager (HR),
Bangalore Metro Rail Corporation Limited,
III Floor, BMTC Complex, K.H Road, Shanthinagar, Bengaluru-560 027
ನಿಮ್ಮ ಪ್ರತಿಕ್ರಿಯೆ ಏನು?






