MS Dhoni: ಲಾಸ್ ಆದ ಕೂಲ್ ಕ್ಯಾಪ್ಟನ್: ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ!? ಯಾಕೆ ಏನಾಯ್ತು!?

ಅಕ್ಟೋಬರ್ 1, 2024 - 09:03
 0  7
MS Dhoni: ಲಾಸ್ ಆದ ಕೂಲ್ ಕ್ಯಾಪ್ಟನ್: ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ!? ಯಾಕೆ ಏನಾಯ್ತು!?

2025 ರ IPL ನಲ್ಲಿ ಕೂಲ್ ಕ್ಯಾಪ್ಟನ್ ಎಂ.ಎಸ್​ ಧೋನಿ ಕೋಟಿ ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.  ಐಪಿಎಲ್ 2008ರ ನಿಯಮದ ಪ್ರಕಾರ ಯಾವುದೇ ಪ್ಲೇಯರ್ ಇಂಟರ್​​ನ್ಯಾಷನಲ್ ಕ್ರಿಕೆಟ್​ನಿಂದ ನಿವೃತ್ತಿಯಾದ್ರೆ ಅಥವಾ ಬಿಸಿಸಿಐ ಒಪ್ಪಂದದಿಂದ 5 ವರ್ಷ ದೂರವಿದ್ದರೇ ಆ ಆಟಗಾರನನ್ನ ಅನ್​ಕ್ಯಾಪ್ಡ್ ಪ್ಲೇಯರ್ ಪಟ್ಟಿಗೆ ಸೇರಿಸಲಾಗುತ್ತದೆ. 2021ರ ವರೆಗೆ ಈ ರೂಲ್ಸ್​ ಬಳಕೆಗೆ ಬಾರದ ಕಾರಣ ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಎಂಎಸ್​ ಧೋನಿಗಾಗಿ ಇದನ್ನು ಮತ್ತೆ ಆರಂಭಿಸಲಾಗಿದೆ.​ ಧೋನಿ ಈ ಸಲ ಅನ್​​ಕ್ಯಾಪ್ಡ್​​ ಪ್ಲೇಯರ್ ಆಗಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸಂಭಾವನೆಯಲ್ಲಿ ಭಾರೀ ಕಡಿತವಾಗಿದೆ.

2022ರ ಆವೃತ್ತಿಯಲ್ಲಿ ಮಾಜಿ ಕೂಲ್ ಕ್ಯಾಪ್ಟನ್​ ಧೋನಿ ರಿಟೈನ್​ ಆಟಗಾರನಾಗಿ ಸಿಎಸ್​ಕೆಯಿಂದ 12 ಕೋಟಿ ಪಡೆಯುತ್ತಿದ್ದರು. ಕಳೆದ ಸೀಸನ್​​ನಲ್ಲೂ ಸಿಎಸ್​ಕೆ ಫ್ರಾಂಚೈಸಿ 12 ಕೋಟಿ ರೂ.ಗಳನ್ನ ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಈಗ ಧೋನಿ ಅನ್​​ಕ್ಯಾಪ್ಡ್​ ಪ್ಲೇಯರ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದು 8 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲ್ಲಿದ್ದಾರೆ. ಹೀಗಾಗಿ ಕೇವಲ 4 ಕೋಟಿ ರೂಪಾಯಿ ಮಾತ್ರ ಈ ಬಾರಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow