Munirathna: ಮುನಿರತ್ನಗೆ ಮತ್ತೊಂದು ಬಿಗ್ ಶಾಕ್: ಮತ್ತೆ ಜೈಲು ಪಾಲಾಗ್ತಾರಾ BJP ಶಾಸಕ!?

ನವೆಂಬರ್ 26, 2024 - 13:56
 0  10
Munirathna: ಮುನಿರತ್ನಗೆ ಮತ್ತೊಂದು ಬಿಗ್ ಶಾಕ್: ಮತ್ತೆ ಜೈಲು ಪಾಲಾಗ್ತಾರಾ BJP ಶಾಸಕ!?

ಬೆಂಗಳೂರು: ಗುತ್ತಿದಾರ ಚಲುವರಾಜು ಅವರಿಗೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿದ್ದ ಮುನಿರತ್ನ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮತ್ತೆ ಜೈಲು ಪಾಲಾಗ್ತಾರಾ ಅನ್ನೋ ಅನುಮಾನ ಕೂಡ ಕಾಡಿದೆ. ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿರುವ ಆಡಿಯೋ ಮುನಿರತ್ನ ಅವರದ್ದೇ ಎಂದು ಎಫ್​ಎಸ್​ಎಲ್​ ವರದಿಯಲ್ಲಿ ದೃಢಪಟ್ಟಿದೆ.

ಫೋನ್​ನಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮುನಿರತ್ನ ವಿರುದ್ಧ ಗುತ್ತಿಗೆದಾರ ವೇಲು ನಾಯ್ಕರ್ ದೂರು ದಾಖಲಿಸಿದ್ದು, ಜೊತೆಗೆ ಅವರು ಪೊಲೀಸರಿಗೆ ನೀಡಿದ್ದ ಆಡಿಯೋ ಕ್ಲಿಪ್​ಅನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಆಡಿಯೋದಲ್ಲಿರುವುದು ಮುನಿರತ್ನ ಅವರ ಧ್ವನಿ ಎಂದು ದೃಢವಾಗಿದೆ

ಚೆಲುವರಾಜು ಜತೆಗೆ ಮಾತನಾಡುವ ವೇಳೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆಂದು ಗುತ್ತಿಗೆದಾರ ವೇಲು ನಾಯ್ಕರ್ ಅವರು ಮುನಿರತ್ನ ಅವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಸಹ ಪೊಲೀಸರಿಗೆ ನೀಡಿದ್ದರು. ಈ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಸೆಪ್ಟೆಂಬರ್ 13 ರಂದು ಎಫ್​ಐಆರ್ ದಾಖಲಾಗಿತ್ತು.

ಬಳಿಕ ಸೆ.14ರಂದು ಎಸ್​ಐಟಿ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಆ ವೇಳೆ ಪೆನ್ ಡ್ರೈವ್ ಆಡಿಯೋ ಕ್ಲಿಪ್ ಹಾಗೂ ಬಂಧನ ವೇಳೆ ಪಡೆಯಲಾಗಿದ್ದ ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನು ಎಫ್​ಎಸ್ಎಲ್​ಗೆ ಕಳುಹಿಸಿದರು. ಈಗ ಎಫ್ಎಸ್​ಎಲ್ ರಿಪೋರ್ಟ್ ಎಸ್ಐಟಿ ಪೊಲೀಸರ ಕೈಸೇರಿದ್ದು, ಮುನಿರತ್ನ ಜಾತಿ ನಿಂದನೆ ಮಾಡಿದ್ದರು ಎನ್ನಲಾದ ಆಡಿಯೋ ಧ್ವನಿ ಧೃಡವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow