Ramachaari Serial: ಬುಡುಬುಡಿಕೆ ವೇಷದಲ್ಲಿ ಚಾರು: ಬ್ಯೂಟಿಯ ವೇಷ ಕಂಡು ಫ್ಯಾನ್ಸ್​ ಶಾಕ್​​!

ಮಾರ್ಚ್ 6, 2025 - 18:00
ಮಾರ್ಚ್ 6, 2025 - 18:00
 0  9
Ramachaari Serial: ಬುಡುಬುಡಿಕೆ ವೇಷದಲ್ಲಿ ಚಾರು: ಬ್ಯೂಟಿಯ ವೇಷ ಕಂಡು ಫ್ಯಾನ್ಸ್​ ಶಾಕ್​​!

ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುವ ರಾಮಾಚಾರಿ ಸೀರಿಯಲ್ ಹೆಚ್ಚು ಜನಮನ್ನಣೆ ಪಡೆದಿದೆ. ಧಾರವಾಹಿಯಲ್ಲಿ ನಟಿಸಿರುವ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. 

ಅದರಂತೆ ರಾಮಾಚಾರಿ ಸೀರಿಯಲ್​​ನಲ್ಲಿ ನಟಿ ಚಾರು ಹೊಸ ಅವತಾರ ತಾಳಿದ್ದಾಳೆ. ಬುಡುಬುಡಿಕೆ ವೇಷದಲ್ಲಿ ವೈಶಾಖಾ ಮುಂದೆ ಪ್ರತ್ಯಕ್ಷವಾಗಿದ್ದಾಳೆ ಚಾರು. ಆದ್ರೆ, ಬುಡುಬುಡಿಕೆ ವೇಷದಲ್ಲಿ ಬಂದಿದ್ದು ಚಾರು ಅಂತ ಗೊತ್ತಾಗದೇ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾಳೆ.

ಇನ್ನೂ, ಇದೇ ಮೊದಲ ಬಾರಿಗೆ ಚಾರು ಅಂದ್ರೆ ಮೌನ ಗುಡ್ಡೆಮನೆ ಬುಡುಬುಡಿಕೆ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಖುಷಿಯಲ್ಲಿ ತಮ್ಮ ಇನ್​ಸ್ಟಾ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ನಾನು ಚಿಕ್ಕವಳ ಆಗಿದ್ದಾಗಾ, ಇದು ನನ್ನ ಫೇವರೆಟ್ ಹಾಡು. ನಿಮ್ಮದು ಯಾವುದು? ಕಾಮೆಂಟ್ ಮಾಡಿ ಅಂತ ಬರೆದುಕೊಂಡಿದ್ದಾರೆ.

ಫೋಟೋ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow