RCB ಸೇರಿದ್ರೆ ಫಾರ್ಮ್ ಕಳೆದುಕೊಳ್ತಾರಾ!? ತಂಡ ಸೇರಿದ ಬಳಿಕ ಸಪ್ಪೆಯಾದ ಸಾಲ್ಟ್!

ಜನವರಿ 31, 2025 - 09:07
 0  14
RCB ಸೇರಿದ್ರೆ ಫಾರ್ಮ್ ಕಳೆದುಕೊಳ್ತಾರಾ!? ತಂಡ ಸೇರಿದ ಬಳಿಕ ಸಪ್ಪೆಯಾದ ಸಾಲ್ಟ್!

ಇದು ಯಾರ ಶಾಪ ಅಂತ ಹೇಳೋದು ಮರ್ರೆ. ಸತತ 17 ಸೀಸನ್ ಗಳಿಂದ ಕಪ್ ಗೆಲ್ಲದ RCBಗೆ ಅಭಿಮಾನಿಗಳಿಗೇನು ಕೊರತೆ ಇಲ್ಲ. ಆದರೆ ತಂಡ ಸೇರಿದ ಯಾವುದೇ ಉತ್ತಮ ಆಟಗಾರ ಕೊಂಚ ಲಯ ಕಳೆದುಕೊಳ್ಳುತ್ತಾನೆ. 

ಅದೇ ರೀತಿ ಈ ಬಾರಿಯ ಹರಾಜಿನಲ್ಲಿ ದುಬಾರಿ ಹಣಕೊಟ್ಟು ಖರೀದಿಸಿದ ಇಂಗ್ಲೆಂಡ್ ಆಟಗಾರ ಸಾಲ್ಟ್ ಕಥೆಯೂ ಹೀಗೆ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 11 ಕೋಟಿ ರೂ. ನೀಡಿ ಇಂಗ್ಲೆಂಡ್ ದಾಂಡಿಗ ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಈ ಖರೀದಿಗೆ ಮುಖ್ಯ ಕಾರಣ ಸಾಲ್ಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್​. ಆದರೆ ಆರ್​ಸಿಬಿ ಸೇರಿದ ಬಳಿಕ ಸಾಲ್ಟ್ ಅವರ ಸಿಡಿಲಬ್ಬರದ ಮಾಯವಾಗಿದೆ.

ಮೆಗಾ ಹರಾಜಿಗೂ ಮುನ್ನ ಫಿಲ್ ಸಾಲ್ಟ್ ಭರ್ಜರಿ ಫಾರ್ಮ್​ನಲ್ಲಿದ್ದರು. ಆರ್​ಸಿಬಿ ಸೇರುವ ಮುನ್ನ ಆಡಿದ 4 ಪಂದ್ಯಗಳಲ್ಲಿ 103, 41, 33 ಹಾಗೂ 58 ರನ್​ಗಳ ಸ್ಪೋಟಕ ಇನಿಂಗ್ಸ್ ಆಡಿ ಅಬ್ಬರಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್ ನೋಡಿದ್ದ ಆರ್​ಸಿಬಿ ಫ್ರಾಂಚೈಸಿ ಫಿಲ್ ಸಾಲ್ಟ್ ಖರೀದಿಗಾಗಿ ಮೆಗಾ ಹರಾಜಿನಲ್ಲಿ ಭರ್ಜರಿ ಪೈಪೋಟಿ ನಡೆಸಿತು.

ಪೈಪೋಟಿಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 11 ಕೋಟಿ ರೂ. ನೀಡಿ ಸಾಲ್ಟ್ ಅವರನ್ನು ಖರೀದಿಸಿದೆ. ಆದರೆ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಫಿಲ್ ಸಾಲ್ಟ್ ಅವರ ಬ್ಯಾಟ್ ಸೈಲೆಂಟ್ ಆಗಿದೆ. ಕೊನೆಯ ಮೂರು ಪಂದ್ಯಗಳಲ್ಲೂ ಒಂದಂಕಿ ರನ್​ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿದ್ದಾರೆ.

ಫಿಲ್ ಸಾಲ್ಟ್ ಆರ್​ಸಿಬಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳನ್ನಾಡಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಮ್ಯಾಚ್​ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಸಾಲ್ಟ್, ಚೆನ್ನೈನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ರಾಜ್​ಕೋಟ್​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 5 ರನ್​ಗಳಿಸಿ ನಿರಾಸೆ ಮೂಡಿಸಿದ್ದಾರೆ

ಅಂದರೆ ಆರ್​ಸಿಬಿಗೆ ಬರುವ ಮುನ್ನ ಸಿಡಿಲಬ್ಬರದ ಪ್ರದರ್ಶಿಸಿದ್ದ ಸಾಲ್ಟ್, ಆರ್​ಸಿಬಿಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಮಂಕಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow