ಬೆಂಗಳೂರಲ್ಲಿ CCB ಭರ್ಜರಿ ಕಾರ್ಯಾಚರಣೆ: ಕೋಟಿ ಕೋಟಿ ಮೌಲ್ಯದ ಡ್ರಗ್ಸ್​ ಸೀಜ್!

ಸೆಪ್ಟೆಂಬರ್ 29, 2025 - 12:00
 0  9
ಬೆಂಗಳೂರಲ್ಲಿ CCB ಭರ್ಜರಿ ಕಾರ್ಯಾಚರಣೆ: ಕೋಟಿ ಕೋಟಿ ಮೌಲ್ಯದ ಡ್ರಗ್ಸ್​ ಸೀಜ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್‌ ಅಬ್ಬರದ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ₹7.80 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನೈಜೀರಿಯಾ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಕೆವಿನ್ ರೋಜರ್ ಮತ್ತು ಥಾಮಸ್ ನವೀದ್ ಚೀಮ್ ಎಂದು ಗುರುತಿಸಲಾಗಿದೆ.

 ಆರೋಪಿಗಳು ದೆಹಲಿ ಮತ್ತು ಮುಂಬಯಿಯಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.ಬಂಧಿತರಿಂದ 3.8 ಕೆ.ಜಿ ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್, 42 ಗ್ರಾಂ ತೂಕದ 82 ಎಕ್ಸ್ಟಸಿ ಮಾತ್ರೆಗಳು, 23 ಕೆ.ಜಿ ಗಾಂಜಾ ಹಾಗೂ 482 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಹೆಬ್ಬಗೋಡಿಯಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿಗಳು, ಪರಿಚಿತ ಸ್ಥಳಗಳಲ್ಲಿ ಡ್ರಗ್ಸ್ ಪಾರ್ಸೆಲ್ ಇಟ್ಟು, ಲೊಕೇಶನ್ ಶೇರ್ ಮಾಡುವ ಮೂಲಕ ವ್ಯವಹಾರ ನಡೆಸುತ್ತಿದ್ದರು. ಹಣವನ್ನು ಆನ್‌ಲೈನ್ ಮೂಲಕ ಸ್ವೀಕರಿಸುತ್ತಿದ್ದರು.ಸಿಸಿಬಿ ಹಾಗೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow