Satish Sail: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ʼಗೆ 7 ವರ್ಷ ಜೈಲು! 9 ಕೋಟಿ ರೂ. ದಂಡ!

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಮೊದಲನೇ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 2ನೇ ಕೇಸ್ ವಂಚನೆ ಪ್ರಕರಣದಲ್ಲಿ 7 ವರ್ಷ ಹಾಗೂ ಕಳ್ಳತನ ಪ್ರಕರಣದಲ್ಲೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಮೊದಲ ಪ್ರಕರಣದಲ್ಲಿ ಅಪರಾಧಿಗೆ 6 ಕೋಟಿ ಹಾಗೂ 2ನೇ ಪ್ರಕರಣದಲ್ಲಿ 9 ಕೋಟಿ ದಂಡ ವಿಧಿಸಲಾಗಿದೆ. ಒಟ್ಟು 6 ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಅಂತಿಮ ಆದೇಶ ಹೊರಡಿಸಿದೆ. ಕೇಸ್ನಲ್ಲಿ ದೋಷಿ ಆಗಿರುವ ಸತೀಶ್ ಸೈಲ್ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡನೆ ಮಾಡಿದರು.
ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ಹೇಮಾ ಅವರು ವಾದ ಮಂಡನೆ ಮಾಡಿದರು. ಶಿಕ್ಷೆ ಪ್ರಕಟಣೆ ಮಾಡುವ ವೇಳೆ ಸತೀಶ್ ಸೈಲ್, ಮಹೇಶ್ ಬಿಳಿಯೆ ಅವರಿಗೆ ಜಡ್ಜ್ ಪ್ರಶ್ನೆ ಕೇಳಿದರು. ಎರಡು ಕಡೆಯ ವಾದ ಪತ್ರಿವಾದ ಆಲಿಸಿದ ಕೋರ್ಟ್ ಅಂತಿಮವಾಗಿ ಶಿಕ್ಷೆಯನ್ನು ಪ್ರಕಟಣೆ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






