SBI ನಲ್ಲಿದೆ ಭರ್ಜರಿ ಉದ್ಯೋಗ..! ತಿಂಗಳಿಗೆ 40,000 ಸಂಬಳ - ಆಸಕ್ತರು ಇಂದೇ ಅಪ್ಲೈ ಮಾಡಿ!

ಮಾರ್ಚ್ 21, 2025 - 08:12
 0  11
SBI ನಲ್ಲಿದೆ ಭರ್ಜರಿ ಉದ್ಯೋಗ..! ತಿಂಗಳಿಗೆ 40,000 ಸಂಬಳ - ಆಸಕ್ತರು ಇಂದೇ ಅಪ್ಲೈ ಮಾಡಿ!

ಬ್ಯಾಂಕ್​​ ಕೆಲಸಕ್ಕಾಗಿ ಕಾಯುತ್ತಿರೋರಿಗೆ ಗುಡ್​ನ್ಯೂಸ್​ ಒಂದಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ SBI ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2025 ರಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ 269 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದ್ದು, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಎಸ್‌ಬಿಐ ವೆಬ್‌ಸೈಟ್ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು.

ಬ್ಯಾಂಕ್​ನಲ್ಲಿ ಕೆಲಸ ಮಾಡಬೇಕು ಅನ್ನುವ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಕೆಲ ಪರೀಕ್ಷೆಗಳಿಂದ ಆ ಹುದ್ದೆಗೆ ಹೋಗಲು ಸಾಧ್ಯವಾಗಿರುವುದಿಲ್ಲ. ಕೆಲ ಪರೀಕ್ಷೆಗಳು ಬರೆದರೂ ಕೂಡ ಸೆಲೆಕ್ಟ್​​ ಆಗಿರುವುದಿಲ್ಲ. ಹೀಗಾಗಿ ಅಂತಹ ಬೇಸರ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ. ಯಾವುದೇ ಲಿಖಿತ ಪರೀಕ್ಷೆಯೇ ಇಲ್ಲದೆ ಬ್ಯಾಂಕ್​ನಲ್ಲಿ ಕೆಲಸ ಪಡೆಯಬಹುದಾಗಿದೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ FLC (ಎಫ್​ಎಲ್​ಸಿ) ಕೌನ್ಸಿಲರ್ ಮತ್ತು FLC ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಇನ್ನೂ 18 ದಿನಗಳು ಬಾಕಿ ಇದ್ದು, ಅಂದರೆ ಮಾರ್ಚ್​​​ 21 ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮಾರ್ಚ್​​ 21, 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

SBIನಲ್ಲಿ ಉದ್ಯೋಗ ಪಡೆಯಲು ಅಗತ್ಯ ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಉತ್ಸುಕರಾಗಿರುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 65 ವರ್ಷಗಳು.

SBIನಲ್ಲಿ ಕೆಲಸ ಮಾಡಲು ಅರ್ಹತೆ: ಎಸ್‌ಬಿಐನ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಹತೆಯನ್ನು ಹೊಂದಿರಬೇಕು

SBI ನಲ್ಲಿ ಆಯ್ಕೆಯ ನಂತರದ ವೇತನ

ಕ್ಲೆರಿಕಲ್: ರೂ 30,000

JMGS-I: ರೂ 40,000

ಹೆಚ್ಚಿನ ಮಾಹಿತಿಗಾಗಿ ಮತ್ತು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2025 ರಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ 269 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಈಕೂಡಲೇ ಎಸ್‌ಬಿಐ ವೆಬ್‌ಸೈಟ್ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow