Shocking News: ಬೀದಿ ನಾಯಿಯನ್ನೂ ಬಿಡದ ಕಾಮುಕ: ನಾಯಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ

ಆಗಸ್ಟ್ 6, 2025 - 22:01
 0  15
Shocking News: ಬೀದಿ ನಾಯಿಯನ್ನೂ ಬಿಡದ ಕಾಮುಕ: ನಾಯಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ

ವ್ಯಕ್ತಿಯೊಬ್ಬ ವೇಷ ಧರಿಸಿ ಪ್ರಾಣಿಯಂತೆ ವರ್ತಿಸಿದ್ದಾನೆ. ಸಮಾಜ ಬಾಂಧವರು ತಲೆ ತಗ್ಗಿಸುವ ರೀತಿಯಲ್ಲಿ ಇವನ ವರ್ತನೆಯಾಗಿದೆ. ಸಾರ್ವಜನಿಕ ಉದ್ಯಾನವನದಲ್ಲಿ ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ದೇಶಾದ್ಯಂತ ಇದೀಗ ಭಾರೀ ಸಂಚಲನ ಮೂಡಿಸಿದೆ. ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಪುಣೆಯ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ನಿಮಲ್ ಹೆವನ್ ಎಂಬ ಸರ್ಕಾರೇತರ ಸಂಸ್ಥೆಯ ಸದಸ್ಯರಾದ ರಾಗಿಣಿ ಮೋರ್, ಮೃದುಲಾ ವಾಘ್ಮೋರೆ ಮತ್ತು ಇತರರು, ಕರ್ನಾಟಕ ಮೂಲದ ಕಾರ್ಮಿಕನೊಬ್ಬ ಈ ಆಘಾತಕಾರಿ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಔಪಚಾರಿಕ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕರ್ತೆ ರಾಗಿಣಿ ಮೋರೆ ಅವರ ಪ್ರಕಾರ, ಆರೋಪಿಯನ್ನು 35 ವರ್ಷದ ಮಲ್ಲಪ್ಪ ಹೊಸಮನಿ ಎಂದು ಗುರುತಿಸಲಾಗಿದ್ದು, ಅವರು ಟಿಂಗ್ರೆ ನಗರದಲ್ಲಿ ಹೆಣ್ಣು ನಾಯಿಯನ್ನು ಟಿನ್ ಶೆಡ್‌ಗೆ ಕರೆದೊಯ್ದು ನಂತರ ಅದರ ಮೇಲೆ ಹಲ್ಲೆ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ತಕ್ಷಣವೇ ಎನ್‌ಜಿಒ ಸದಸ್ಯರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಧಾವಿಸಿದ್ದರು. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆರೋಪಿ ಬೀದಿ ನಾಯಿಯ ಬಳಿಗೆ ಬಂದು ಬಲವಂತವಾಗಿ ಹತ್ತಿರದ ಟಿನ್ ಶೆಡ್‌ಗೆ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೂಲಗಳ ಪ್ರಕಾರ, ಆರೋಪಿ ಈ ಬೀದಿ ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸಲಾಗಿದೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow