SHOCKING NEWS: ಹುಡುಗಿಯನ್ನು ತೋರಿಸಿ ತಾಯಿ ಜೊತೆಗೆ ಯುವಕನ ಮದುವೆ.! ಮುಂದೇನಾಯ್ತು..?

ಮೇ 2, 2025 - 22:01
 0  10
SHOCKING NEWS: ಹುಡುಗಿಯನ್ನು ತೋರಿಸಿ ತಾಯಿ ಜೊತೆಗೆ ಯುವಕನ ಮದುವೆ.! ಮುಂದೇನಾಯ್ತು..?

ಮದುವೆ ಅನ್ನೋದು ಎರಡು ಜೀವಗಳನ್ನು ಒಂದು ಮಾಡೋ ಪವಿತ್ರ ಬಂಧ. ಆದ್ರೆ ಇಲ್ಲೊಬ್ಬ ಯುವಕ ಈ ಬಂಧವನ್ನು ನಂಬಿ ಮೋಸ ಹೋಗಿದ್ದಾನೆ. ಹೌದು ಉತ್ತರಪ್ರದೇಶದ ಮೇರಠ್‌ನಲ್ಲಿ ಮೊಹಮ್ಮದ್‌ ಅಜೀಂ ಎಂಬ 22 ವರ್ಷದ ಬ್ರಹ್ಮಪುರಿ ನಿವಾಸಿ ಯುವಕನ ಮದುವೆಯನ್ನು ಅವನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ, ಶಾಮ್ಲಿ ಜಿಲ್ಲೆಯ ಮನ್ತಾಶಾ ಎಂಬ ಯುವತಿಯೊಂದಿಗೆ ನಿಗದಿಪಡಿಸಿದ್ದರು.

ಅದರಂತೆ ಮಾ.31ರಂದು ಮದುವೆಯೂ ನಡೆಯಿತು. ಈ ವೇಳೆ, ಸಂಪ್ರಾದಾಯದಂತೆ ಮೌಲ್ವಿ ಹುಡುಗಿಯ ಹೆಸರನ್ನು ತಾಹಿರಾ ಎಂದು ಹೇಳಿದಾಗ ಅಜೀಂ ಅವಾಕ್ಕಾಗಿದ್ದಾನೆ. ಬಳಿಕ ಆಕೆಯ ಮುಸುಕು ತೆಗೆದಾಗ 21 ವರ್ಷದ ಯುವತಿಯ ಬದಲು, ವಧುವಿನ ಉಡುಗೆಯಲ್ಲಿದ್ದ ಆಕೆಯ 45 ವರ್ಷದ ತಾಯಿಯ ದರ್ಶನವಾಗಿದೆ.

 ಹೀಗೆ, ತಾನು ವರಿಸಿದ್ದು ವಧುವಿನ ತಾಯಿಯನ್ನು ಎಂದು ತಿಳಿದು ಮದುಮಗ ಕಕ್ಕಾಬಿಕ್ಕಿಯಾಗಿದ್ದಾನೆ. ತನಗಾದ ವಂಚನೆಯ ವಿರುದ್ಧ ಅಜೀಂ ಪ್ರತಿಭಟಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ. ಆದರೂ ಅಜೀಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ವಧುವಿನ ಕುಟುಂಬಕ್ಕೆ 5 ಲಕ್ಷ ರು.ವನ್ನೂ ಕೊಡಲಾಗಿತ್ತು’ ಎಂದು ಆರೋಪಿಸಿದ್ದಾನೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow