Smriti Mandhana: ಇಂದೋರ್ ಸೊಸೆಯಾಗ್ತಿದ್ದಾರೆ ಸ್ಟಾರ್ ಆಟಗಾರ್ತಿ! ಸ್ಮೃತಿ ಜೊತೆ ಮದುವೆ ಖಚಿತಪಡಿಸಿದ ಪಲಾಶ್
ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ. ಸ್ಮೃತಿ ತಮ್ಮ ಸೌಂದರ್ಯ ಹಾಗೂ ಆಟದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸದ್ಯ ಸ್ಮೃತಿ ಮಂದಾನ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಮಾಹಿತಿ ಬಂದಿದೆ. ಸ್ಮೃತಿ ಮಂದಾನ ಮಧ್ಯಪ್ರದೇಶದ ಇಂದೋರ್ ಮೂಲದ ಮ್ಯೂಸಿಕ್ ಡೈರೆಕ್ಟರ್ ಮತ್ತು ಸಿನಿಮಾ ನಿರ್ಮಾಪಕ ಪಲಾಶ್ ಮುಚ್ಚಲ್ ರೊಂದಿಗೆ 7 ಹೆಜ್ಜೆ ಹಾಕಲಿದ್ದಾರೆ.
“ನಾವಿಬ್ಬರೂ ಶೀಘ್ರದಲ್ಲೇ ಮದುವೆ ಆಗಲಿದ್ದೇವೆ” ಎಂದು ಪಲಾಶ್ ಮುಚ್ಚಲ್ ಹೇಳಿದ್ದು, ಬಾಲಿವುಡ್‌ನ ಅತೀ ಕಿರಿಯ ಸಂಗೀತ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಪಲಾಶ್ ''ಆರ್ಧ'' ಮತ್ತು ''ಕಾಮ್ ಚಾಲೂ ಹೈ'' ಚಿತ್ರಗಳ ನಿರ್ದೇಶಕ ಕೂಡ ಹೌದು. ಸದ್ಯ ''ರಾಜು ಬಾಜೇವಾಲಾ'' ಎಂಬ ಚಿತ್ರವನ್ನು ಪಲಾಶ್ ನಿರ್ದೇಶನ ಮಾಡುತ್ತಿದ್ದಾರೆ. ಇಂಥಾ ಪಲಾಶ್ ಮತ್ತು ಸ್ಮೃತಿ ಮಂದಾನ ಪ್ರೇಮದ ಬಲೆಯಲ್ಲಿ ಸಿಲುಕಿ ಹಲವು ವರ್ಷಗಳಾಗಿವೆ.
ಹಲವು ಬಾರಿ ಇವರ ಪ್ರೇಮಕಥೆಯ ಕುರಿತು ಚರ್ಚೆ ಕೂಡ ನಡೆದಿದೆ. ಆದರೆ.. ಈ ಲವ್ ಸ್ಟೋರಿಯ ಮೇಲೆ ಮದುವೆಯ ಮುದ್ರೆ ಬೀಳುವುದು ಯಾವಾಗ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗೆ ಕೂಡ ಉತ್ತರ ಸಿಕ್ಕಿದ್ದು, ಫ್ಯಾನ್ಸ್‌ಗಳು ಇದರಿಂದ ತುಂಬಾ ಖುಷಿಪಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೂ ಮುನ್ನವೇ ಈ ಮದುವೆಯ ಬಗ್ಗೆ ಫ್ಯಾನ್ಸ್‌ಗೆ ಮಾಹಿತಿ ನೀಡಲಾಗಿದೆ. ಸ್ಮೃತಿ ಮಂದಾನ ತಮ್ಮ ಜೀವನದ ಕೆಲವು ಅಪ್ಡೇಟ್ಗಳನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚುತ್ತಾ ಬಂದಿದ್ದು, ಈಗ ಶೀಘ್ರದಲ್ಲೇ ಅವರು ಇಂದೋರ್ ಸೊಸೆಯಾಗಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?