World Cup 2025: ಏಕದಿನದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ

ಅಕ್ಟೋಬರ್ 12, 2025 - 18:26
 0  12
World Cup 2025: ಏಕದಿನದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ

ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಕೌಶಲ್ಯದಿಂದ ದಾಖಲೆಗಳ ಮಳೆ ಸುರಿಸಿದ್ದಾರೆ. ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 80 ರನ್ ಗಳಿಸಿದ ಮಂಧಾನ, ಹಲವು ಅದ್ಭುತ ಮೈಲಿಗಲ್ಲುಗಳನ್ನು ತಲುಪಿದ್ದಾರೆ.

ಹಿಂದಿನ ಮೂರು ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದ ಮಂಧಾನ, ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ತಮ್ಮ ಹಳೆಯ ಲಯಕ್ಕೆ ಮರಳಿದರು. ಭಾರತ ಮೊದಲು ಬ್ಯಾಟಿಂಗ್ ಮಾಡಿದ ಈ ಪಂದ್ಯದಲ್ಲಿ, ಮಂಧಾನ 46 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು ಮತ್ತು ಆ ಬಳಿಕ ರನ್‌ಗಳ ಮಳೆ ಹರಿಸಿದರು.

ದಾಖಲೆಗಳ ಸರಮಾಲೆ:

ಕ್ಯಾಲೆಂಡರ್ ವರ್ಷದಲ್ಲಿ 1,000 ಏಕದಿನ ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಗೌರವ ಸ್ಮೃತಿ ಮಂಧಾನ ಅವರಿಗೆ ಲಭಿಸಿದೆ.

ಈ ಸಾಧನೆಯನ್ನು ಕೇವಲ 18 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿ, ನಾಲ್ಕು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.

58 ರನ್ ಪೂರೈಸಿದ ಕ್ಷಣದಲ್ಲಿ ಮಂಧಾನ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್‌ಗಳ ಮೈಲಿಗಲ್ಲು ತಲುಪಿದರು.

ಕೇವಲ 29 ವರ್ಷ 86 ದಿನಗಳಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಮಹಿಳಾ ಕ್ರಿಕೆಟರ್ ಎಂಬ ದಾಖಲೆ ನಿರ್ಮಿಸಿದರು.

ಕೇವಲ 112 ಇನ್ನಿಂಗ್ಸ್ ಮತ್ತು 5,569 ಎಸೆತಗಳಲ್ಲಿ 5,000 ರನ್ ಪೂರೈಸಿ, ಸ್ಟೆಫಾನಿ ಟೇಲರ್ (129 ಇನ್ನಿಂಗ್ಸ್) ಮತ್ತು ಸುಜಿ ಬೇಟ್ಸ್ (6,182 ಎಸೆತಗಳು) ಅವರ ದಾಖಲೆಯನ್ನು ಮುರಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow