ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಡಬಲ್ ಸಂಭ್ರಮ: ಅತ್ತ ಮದುವೆ, ಇತ್ತ ಎಂಗೇಜ್ಮೆಂಟ್! ಏನಿದು ಸೀಕ್ರೆಟ್!

ಟಾಲಿವುಡ್ ಅಖಿಲ್ ಅಕ್ಕಿನೇನಿ ಬ್ಯಾಚುಲರ್ ಲೈಫ್ ಗೆ ಟಾಟಾ ಬೈ ಬೈ ಹೇಳಿದ್ದಾರೆ. ಶೀಘ್ರದಲ್ಲೇ ಅಖಿಲ್ ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಅಖಿಲ್, ಝೈನಾಬ್ ರಾವಡ್ಜಿ ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿರುವ ನಾಗಾರ್ಜುನ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆದಿದೆ.
ಅಖಿಲ್ ನಿಶ್ಚಿತಾರ್ಥ ಫೋಟೋವನ್ನು ನಟ ನಾಗಾರ್ಜುನ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಮೂಲಕ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಮೊದಲನೇ ಮಗನ ಮದುವೆ ಒಂದೆಡೆ ಆದ್ರೆ, ಇನ್ನೊಂದೆಡೆ ಸದ್ದಿಲ್ಲದೇ ಕಿರಿಯ ಮಗನ ಎಂಗೇಜ್ಮೆಂಟ್ ನಡೆದಿದೆ.
ಅಖಿಲ್ ಅಕ್ಕಿನೇನಿ ಮದುವೆ ಆಗುತ್ತಿರೋ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಈಗಾಗಲೇ ಅಖಿಲ್ ಅಕ್ಕಿನೇನಿ ಅವರು ಝೈನಾಬ್ ರಾವಡ್ಜಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ನಾಗಾರ್ಜುನ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನೂತನ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ. ಇನ್ನೂ, ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆಗಳ ಮಾಡಿಕೊಳ್ಳುವ ಮಧ್ಯೆ ಎರಡನೇ ಮಗನ ಮದುವೆ ತಯಾರಿಯಲ್ಲಿ ಅಕ್ಕಿನೇನಿ ನಾಗಾರ್ಜುನ ಸಖತ್ ಬ್ಯುಸಿಯಾಗಿದ್ದಾರೆ.
ತೆಲುಗು ನಟ ಅಖಿಲ್ ಅಕ್ಕಿನೇನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಇವರಿಗೆ ಪೇಂಟಿಂಗ್ನಲ್ಲಿ ಒಲವು ಜಾಸ್ತಿ ಇದೆ. ಪೇಂಟಿಂಗ್ ಕ್ಷೇತ್ರದಲ್ಲಿಯೇ ಹೆಸರುವಾಸಿಯಾದ ಪ್ರತಿಭಾವಂತ ಕಲಾವಿದೆಯಾಗಿದ್ದಾರೆ. 27ನೇ ವರ್ಷದ ಝೈನಾಬ್ ರಾವಡ್ಜಿ ಅವರು ಹೈದರಾಬಾದ್ನಲ್ಲಿ “ರಿಫ್ಲೆಕ್ಷನ್ಸ್” ನಂತಹ ಪ್ರದರ್ಶನಗಳೊಂದಿಗೆ ಕಲಾ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಹೈದರಾಬಾದ್ನಲ್ಲಿ ಹುಟ್ಟಿ ಬೆಳೆದ ಜೈನಾಬ್ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಇನ್ನೂ ಝೈನಾಬ್ ರಾವಡ್ಜಿ ಅವರ ನಿವ್ವಳ ಮೌಲ್ಯ ಮತ್ತು ಶಿಕ್ಷಣದ ವಿವರಗಳು ಖಾಸಗಿಯಾಗಿಯೇ ಉಳಿದಿವೆ. ಇದೀಗ ಅಕ್ಕಿನೇನಿ ಕುಟುಂಬದೊಂದಿಗೆ ಸಂಬಂಧ ಬೆಳೆಸಿದ್ದಾರೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ಹಾಗೂ ಬಿಗ್ಬಾಸ್ ತೆಲುಗು ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ 2ನೇ ಮಗ ಅಖಿಲ್ಗೂ ಗುಟ್ಟಾಗಿಯೇ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






