ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆ ವೇಳೆ ಈ ಮಿಸ್ಟೇಕ್ ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಹಿಂದೂ ಧರ್ಮದಲ್ಲಿ ಭಕ್ತರು ಮಾಡುವ ದೈನಂದಿನ ಪೂಜೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ವೈಶಿಷ್ಟ್ಯತೆ ಇದೆ. ನಾವು ಮನೆಯಲ್ಲಿ ಮಾಡುವ ಈ ಸರಳ ಪೂಜೆಯು ನಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಅದೇ ರೀತಿ ನಾವು ಪೂಜೆಯಲ್ಲಿ ಹಲವು ನಿಯಮಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯ. ನಿಯಮಗಳು ಅಥವಾ ಆಚರಣೆಗಳ ಪ್ರಕಾರ ಪೂಜಾ ಕೈಂಕರ್ಯವನ್ನು ಪೂರ್ಣಗೊಳಿಸುವುದರಿಂದ ಮಾತ್ರ ನಾವು ಪೂಜೆಯ ಸಂಪೂರ್ಣ ಫಲವನ್ನು ಪಡೆಯುತ್ತೇವೆ. ಆದರೆ, ತಿಳಿದೋ ತಿಳಿಯದೆಯೋ ಕೆಲವರು ಪೂಜೆಯ ವೇಳೆ ತಪ್ಪು ಮಾಡುತ್ತಾರೆ. ಇದರಿಂದ ಅವರಿಗೆ ಪೂಜೆಯ ಫಲ ಸಿಗುವುದಿಲ್ಲ. ಪೂಜೆ ಅಪೂರ್ಣ. ಅಂತಹ ಪರಿಸ್ಥಿತಿಯಲ್ಲಿ, ನೀವು ತಪ್ಪು ವಿಧಾನ ಮತ್ತು ನಿಯಮಗಳೊಂದಿಗೆ ಪೂಜೆಯನ್ನು ಮಾಡಿದರೆ, ನೀವು ತುಂಬಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ದೇವರಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಪೂಜೆ ಮಾಡುವುದಕ್ಕೂ ಕೆಲವು ನಿಯಮಗಳಿದೆ. ಅದನ್ನು ಎಂದಿಗೂ ಮೀರಬಾರದು.
ನಿಮ್ಮ ದೇವರ ಮನೆಯಲ್ಲಿ ಅಪ್ಪಿ-ತಪ್ಪಿ 15 ಇಂಚುಗಳಿಗಿಂತ ದೊಡ್ಡದಾದ ದೇವರ ವಿಗ್ರಹಗಳು ಇರಬಾರದು. ಅಲ್ಲದೇ, ದೇವರ ಮನೆಯಲ್ಲಿ ಗಣೇಶ, ಸರಸ್ವತಿ ಮತ್ತು ಲಕ್ಷ್ಮಿ ನಿಂತಿರುವ ಮೂರ್ತಿಗಳು ಇದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಮನೆಯ ದೇವರಕೋಣೆಯಲ್ಲಿ ನಿಮಗೆ ಗಿಫ್ಟ್ ಆಗಿ ಬಂದ ವಿಗ್ರಹಗಳನ್ನು ಇಟ್ಟರೆ ತಪ್ಪು ಎನ್ನಲಾಗುತ್ತದೆ. ಅಲ್ಲದೇ ಮರ ಹಾಗೂ ಫೈಬರ್ ಮೂರ್ತಿಗಳನ್ನು ಇಟ್ಟುಕೊಳ್ಳಬಾರದು. ಅದನ್ನು ನದಿಗೆ ಬಿಡುವುದು ಉತ್ತಮ.
ಇಷ್ಟೇ ಅಲ್ಲದೇ, ದೇವರ ಕೋಣೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ 3 ವಿಗ್ರಹ ಇಡಬಾರದು. ಹಾಗೆಯೇ ಶಿವಲಿಂಗವನ್ನು ಸಹ 2 ಇಡುವುದು ಅಪರಾಧ. ಇದರ ಜೊತೆಗೆ ಸಾಲಿಗ್ರಾಮ ಹಾಗೂ ಸೂರ್ಯನ 2 ವಿಗ್ರಹ ಅಪಾಯವನ್ನು ಉಂಟುಮಾಡುತ್ತದೆ. ಕೇವಲ ದೇವರ ವಿಗ್ರಹ ಮಾತ್ರ ಅಲ್ಲ, ದೇವರ ಕೋಣೆಯಲ್ಲಿ ಎಂದಿಗೂ ದೇವರ ಬಟ್ಟೆ, ಪುಸ್ತಕ ಹಾಗೂ ಇತರ ವಸ್ತುಗಳನ್ನು ಇಡಬಾರದು. ಯಾವಾಗಲೂ ದೇವರ ಮನೆ ತುಂಬಾ ಸ್ವಚ್ಛವಾಗಿರಬೇಕು. ಇನ್ನು ದೇವರಿಗೆ ದೀಪ ಹಚ್ಚುವಾಗ ಸಹ 2 ದೀಪವನ್ನು ಹಚ್ಚಬೇಕು. ಬಲ ಬದಿಯ ದೀಪವನ್ನು ತುಪ್ಪದಿಂದ ಹಚ್ಚಬೇಕು ಹಾಗೂ ಎಡಬದಿಯ ದೀಪವನ್ನು ಎಣ್ಣೆಯಿಂದ. ಅಲ್ಲದೇ, ನೀವು ಬೆಳಗ್ಗೆ ತುಪ್ಪದ ದೀಪ ಹಾಗೂ ಸಂಜೆ ಎಣ್ಣೆಯ ದೀಪವನ್ನೂ ಸಹ ಹಚ್ಚಿದರೆ ಒಳ್ಳೆಯದು.
ಎಂದಿಗೂ ದೇವರ ಮನೆಯಲ್ಲಿ ನೆಲದ ಮೇಲೆ ಕುಳಿತು ಪೂಜೆ ಮಾಡಬಾರದು. ಯಾವಾಗಲೂ ಚಾಪೆ ಹಾಗೂ ಬಟ್ಟೆ ಹಾಕಿ ಅದರ ಮೇಲೆ ಕುಳಿತು ಪೂಜೆ ಮಾಡಬೇಕು. ಇದರಿಂದ ಕಷ್ಟಗಳು ನಿವಾರಣೆಯಾಗುತ್ತದೆ. ಪೂಜೆಯನ್ನು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಮುಖ ಮಾಡಿ ಮಾಡುವುದರಿಂದ ಒಳ್ಳೆಯದಾಗುತ್ತದೆ. ಹಾಗೆಯೇ, ಪೂಜೆ ಮಾಡಿದ ನಂತರ ಆಹಾರ ದಾನ ಮಾಡುವುದು ಸಹ ಉತ್ತಮ ಎನ್ನಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






