ಉದ್ಯೋಗ ಮಾಹಿತಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ! ಹೀಗೆ ಅಪ್ಲೈ ಮಾಡಿ!

ಮಾರ್ಚ್ 13, 2025 - 08:02
 0  11
ಉದ್ಯೋಗ ಮಾಹಿತಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ! ಹೀಗೆ ಅಪ್ಲೈ ಮಾಡಿ!

ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಹಾಗೂ ಇತರೆ ಉದ್ಯೋಗಗಳ ಭರ್ತಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಹಾಗೂ ಇತರೆ ಉದ್ಯೋಗಗಳಿಗೆ ಯುಪಿಎಸ್​ಸಿ ಇಲಾಖೆಯ ಅರ್ಹತಾ ಮಾನದಂಡಗಳೇನು, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಅಂತಿಮ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿ ನೀಡಲಾಗಿದೆ. 

ಹುದ್ದೆಗಳ ವಿವರ:

ಅಪಾಯಕಾರಿ ಸರಕುಗಳ ಇನ್ಸ್‌ಪೆಕ್ಟರ್- 3 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ ಹುದ್ದೆಗಳು- 33 ಉದ್ಯೋಗಗಳು

ವಿದ್ಯಾರ್ಹತೆ

ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ
ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಅಥವಾ UGC ಅಥವಾ CSIR ನಡೆಸಿದ ಪಾಸ್ ಆಗಿರಬೇಕು
ಪಿಎಚ್‌ಡಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಅರ್ಜಿ ಶುಲ್ಕ ಎಷ್ಟು ಇದೆ?

ಎಲ್ಲ ಅಭ್ಯರ್ಥಿಗಳು 25 ರೂಪಾಯಿ ಪಾವತಿ ಮಾಡಬೇಕು
ಮಹಿಳೆಯರು, ಎಸ್‌ಸಿ, ಎಸ್‌ಟಿ ಹಾಗೂ ಅಂಗವೈಕಲ್ಯ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ

ಆಯ್ಕೆ ಪ್ರಕ್ರಿಯೆ-

ಅಭ್ಯರ್ಥಿಗಳು ಅರ್ಜಿಗಳಲ್ಲಿ ಒದಗಿಸಿದ ವಿವರಗಳ ಆಧಾರಿಸಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ
ಅರ್ಜಿಯಲ್ಲಿ ಅರ್ಹತಾ ಮಾನದಂಡ ಪೂರೈಸುವವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತೆ
ಅಭ್ಯರ್ಥಿ ಶಾರ್ಟ್​ ಲಿಸ್ಟ್​ಗೆ ಅರ್ಹತೆ ಪಡೆದ್ರೆ ಮಾತ್ರ ಸಲ್ಲಿಸಿದ ದಾಖಲೆ ಪರಿಶೀಲಿಸಲಾಗುತ್ತದೆ
ಸಂದರ್ಶನದಲ್ಲಿ ಪರ್ಫಾಮೆನ್ಸ್ ಮತ್ತು ಪರಿಶೀಲಿಸಿದ ರುಜುವಾತುಗಳ ಆಧಾರದ ಮೇಲೆ ಆಯ್ಕೆ

ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗುವಾಗ ಮೂಲ ದಾಖಲೆ ಹಾಗೂ ಎಲ್ಲ ಪ್ರಮಾಣ ಪತ್ರ ಹೊಂದಿರಬೇಕು. ಸೆಲ್ಫ್​ ಅಟಿಸ್ಟೇಡ್​ ಮಾಡಿರುವ ಜೆರಾಕ್ಸ್​ ಪ್ರತಿಗಳನ್ನು ಹಾಜರು ಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಪರಿಶಿಲನೆ ಮಾಡಬೇಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow