ಉದ್ಯೋಗದ ಮಾಹಿತಿ: ಶಾಸಕಾಂಗ ಇಲಾಖೆಯಲ್ಲಿ ಕಚೇರಿಯಲ್ಲಿದೆ ಹಲವು ಕೆಲಸ, ಅರ್ಹರು ಅಪ್ಲೈ ಮಾಡಿ!

ಭಾರತ ಸರ್ಕಾರದಡಿ ಬರುವ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನ ಶಾಸಕಾಂಗ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಇಲಾಖೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆ ಮಾಡುವವರು ಕೇಳಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿ ಇಮೇಲ್ ಮೂಲಕ ಕಳುಹಿಸಬಹುದು. ಇಮೇಲ್- prashant.bhardwaj78@gov.in. ಆಫ್ಲೈನ್ ಮೂಲಕವು ಅರ್ಜಿ ಸಲ್ಲಿಕೆ ಮಾಡಬಹುದು.
ಉದ್ಯೋಗ ಹೆಸರು– ಕಚೇರಿ ಸಹಾಯಕರು
ಒಟ್ಟು ಎಷ್ಟು ಹುದ್ದೆಗಳು- 05
ವಯೋಮಿತಿ- 21- 40 ವರ್ಷ
ಮಾಸಿಕ ವೇತನ ಶ್ರೇಣಿ- 35,000
ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ, ಬಿ.ಟೆಕ್, ಬಿಸಿಎ ಅಥವಾ 1 ವರ್ಷದ ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್
ಕಚೇರಿಯಲ್ಲಿ ಕೆಲಸ ಏನು ಇರುತ್ತದೆ?
ದಾಖಲಾತಿ ಸ್ಕ್ಯಾನಿಂಗ್, ಆಡಳಿತ, ರೆಕಾರ್ಡ್ ನಿರ್ವಹಣೆಗಳಲ್ಲಿ 2 ವರ್ಷದ ಅನುಭವ ಇರಬೇಕು.
ಎಂಎಸ್ ಆಫೀಸ್, ಎಂಎಸ್ ವರ್ಲ್ಡ್, ಎಕ್ಸೆಲ್, ಪವರ್ ಪಾಯಿಂಟ್ ಬಳಕೆ ಗೊತ್ತಿರಬೇಕು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 10/ 04/ 2025
ನಿಮ್ಮ ಪ್ರತಿಕ್ರಿಯೆ ಏನು?






