ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲ್ಯಾನ್: ಆ ಇಬ್ಬರು ಸ್ಟಾರ್ʼಗಳ ಮೇಲೆ RCB ಕಣ್ಣು!

IPL 2025 ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಅದರಂತೆ ಪ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಾಗಿದೆ. ಕೆ.ಎಲ್.ರಾಹುಲ್, ರಿಷಭ್ ಪಂತ್ ಮೆಗಾ ಹರಾಜಿಗೆ ಬರೋದು ಫಿಕ್ಸ್ ಆಗಿದೆ. ಇದೀಗ ಇವರಿಬ್ಬರ ಮೇಲೆ ಆರ್ಸಿಬಿಯ ಕಣ್ಣು ಬಿದ್ದಿದೆ.
ಆರೇ ದಿನಗಳಲ್ಲಿ ಐಪಿಎಲ್ ತಂಡಗಳ ರಿಟೈನ್ ಲಿಸ್ಟ್ ಹೊರ ಬೀಳಲಿದೆ. ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದ್ರ ನಡುವೆ ಎರಡು ಫ್ರಾಂಚೈಸಿಗಳು ತಮ್ಮ ನಾಯಕರಿಗೆ ಶಾಕ್ ನೀಡಿವೆ.
ಐಪಿಎಲ್ ಟೂರ್ನಿ ಮಧ್ಯೆಯಿಂದಲೇ ಚರ್ಚೆಯ ಕೇಂದ್ರ ಬಿಂದುವಾಗಿದ್ದ ಹೆಸರು ಕೆ.ಎಲ್.ರಾಹುಲ್. ಲಕ್ನೋ ಮಾಲೀಕರ ಜೊತೆಗಿನ ವಾಗ್ವಾದದ ಬಳಿಕವೇ ರಾಹುಲ್, ಲಕ್ನೋ ಬಿಡ್ತಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಆ ಸುದ್ದಿ ಬಹುತೇಕ ನಿಜವಾದಂತಿದೆ. ಲಕ್ನೋ ಫ್ರಾಂಚೈಸಿ ಕೆ.ಎಲ್ ರಾಹುಲ್ಗೆ ಗೇಟ್ಪಾಸ್ ನೀಡಲು ನಿರ್ಧರಿಸಿದೆ.
ಮೆಂಟರ್ ಜಹೀರ್ ಖಾನ್, ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಆ್ಯಂಡ್ ಟೀಮ್ ಮ್ಯಾನೇಜ್ಮೆಂಟ್ ಕಳೆದ ಸೀಸನ್ನಲ್ಲಿ ತಂಡದ ಸೋಲಿನ ಪರಾಮರ್ಶೆ ನಡೆಸಿದ್ದಾರೆ. ಈ ವೇಳೆ ಲಕ್ನೋ ತಂಡದ ಸೋಲಿಗೆ ಪ್ರಮುಖ ಕಾರಣವೇ ಕೆ.ಎಲ್.ರಾಹುಲ್ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಕೆ.ಎಲ್.ರಾಹುಲ್ ಆಡಿದ ಲಾಂಗ್ ಇನ್ನಿಂಗ್ಸ್ಗಳಲ್ಲೇ ಲಕ್ನೋ ಬಹುಪಾಲು ಮುಖಭಂಗ ಅನುಭವಿಸಿದೆ. ಇದೇ ಕಾರಣಕ್ಕೆ ಕೆ.ಎಲ್.ರಾಹುಲ್ನ ಬಿಟ್ಟು ಮುಂದೆ ಸಾಗಲು ಲಕ್ನೋ ನಿರ್ಧರಿಸಿದೆ.
ಕೆ.ಎಲ್.ರಾಹುಲ್ ಆ್ಯಂಡ್ ರಿಷಭ್ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಇದು ವಿಕೆಟ್ ಕೀಪರ್ ಆ್ಯಂಡ್ ಕ್ಯಾಪ್ಟನ್ನ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಪಾಲಿಗೆ ಗುಡ್ನ್ಯೂಸ್ ಆಗಿದೆ. ಈ ಇಬ್ಬರಲ್ಲಿ ಒಬ್ಬರನ್ನ ಮೆಗಾ ಹರಾಜಿನಲ್ಲಿ ಖರೀದಿಸುವ ಹೆಬ್ಬಯಕೆ ಹೊಂದಿರುವ ಆರ್ಸಿಬಿ, ಒಂದೇ ಕಲ್ಲಿಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್ನಲ್ಲಿದೆ.
ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್, ವಿಕೆಟ್ ಕೀಪರ್ ಆ್ಯಂಡ್ ಕ್ಯಾಪ್ಟನ್ ಮೆಟಿರಿಯಲ್ಸ್.. ಅಷ್ಟೇ ಅಲ್ಲ. ಗೇಮ್ ಚೇಂಜರ್ ಪ್ಲೇಯರ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ಈ ಇಬ್ಬರಲ್ಲಿ ಯಾರೇ ಆರ್ಸಿಬಿಗೆ ಬಂದ್ರೂ, ತಂಡದ ಚರೀಷ್ಮಾ ಬದಲಾಗುತ್ತೆ. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್ಸಿಬಿ, ಯಾರನ್ನು ಖರೀದಿಸುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






