ಒಂದೇ ವೇದಿಕೆಯಲ್ಲಿ ಮಾಜಿ ಅತ್ತೆ-ಸೊಸೆ: ಸಮಂತಾ ಭಾವುಕ ಮಾತು.. ಅಮಲಾ ಅಕ್ಕಿನೇನಿ ಚಪ್ಪಾಳೆ!

ಮೇ 24, 2025 - 18:08
 0  7
ಒಂದೇ ವೇದಿಕೆಯಲ್ಲಿ ಮಾಜಿ ಅತ್ತೆ-ಸೊಸೆ: ಸಮಂತಾ ಭಾವುಕ ಮಾತು.. ಅಮಲಾ ಅಕ್ಕಿನೇನಿ ಚಪ್ಪಾಳೆ!

ಖ್ಯಾತ ತೆಲುಗು ಸಿನಿಮಾ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಚಿತ್ರರಂಗದಲ್ಲಿ 15 ಅದ್ಭುತ ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ಅವರನ್ನು ಜೀ ತೆಲುಗಿನ ಅಪ್ಸರಾ ಪ್ರಶಸ್ತಿಗಳಲ್ಲಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಮಂತಾ ಅವರ ಭಾವನಾತ್ಮಕ ಭಾಷಣ ಮತ್ತು ಅವರ ಮಾಜಿ ಅತ್ತೆ ಅಮಲಾ ಅಕ್ಕಿನೇನಿ ಅವರ ಆತ್ಮೀಯ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯಿತು. ವಿಚ್ಛೇದನದ ನಂತರ ಸಮಂತಾ ಮತ್ತು ಅಮಲಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಹೌದು ಕಾರ್ಯಕ್ರಮದಲ್ಲಿ ಸಮಂತಾ ಮಾತನಾಡಿ, ತೆಲುಗು ಚಿತ್ರರಂಗ ನನಗೆ ಎಲ್ಲವನ್ನೂ ನೀಡಿದೆ. ಇದೇ ನನ್ನ ಕರ್ಮ ಭೂಮಿ. ತೆಲುಗು ಪ್ರೇಕ್ಷಕರಿಗೆ ಯಾವಾಗಲೂ ನಾನು ಮೊದಲ ಸ್ಥಾನ ಕೊಡುತ್ತೇನೆ ಎಂದು ಭಾವುಕವಾಗಿ ಸಮಂತಾ ಮಾತನಾಡಿದರು. ಈ ವೇಳೆ ಸ್ಯಾಮ್ ಮಾತಿಗೆ, ಅಮಲಾ ನಗು ನಗುತ್ತಾ ಚಪ್ಪಾಳೆ ತಟ್ಟಿದ್ದಾರೆ.

ಅಂದಹಾಗೆ, 2010ರಲ್ಲಿ ‘ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ನಾಗಚೈತನ್ಯಗೆ ನಾಯಕಿ ಸಮಂತಾ ನಟಿಸಿದರು. ಇಲ್ಲಿಯೇ ನಾಗಚೈತನ್ಯರನ್ನು ನಟಿ ಮೊದಲು ಭೇಟಿಯಾದರು. ಈ ಪರಿಚಯ ಪ್ರೀತಿಗೆ ತಿರುಗಿ ಮದುವೆಗೆ ಮುನ್ನಡಿ ಬರೆದಿತ್ತು. 2017ರಲ್ಲಿ ಇಬ್ಬರೂ ಮದುವೆಯಾದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow