ಕರ್ನಾಟಕದ "ಕೈ" ನಾಯಕರಲ್ಲಿ ಆಂತರಿಕ ಕಲಹ: DCM ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಳಗಾವಿ:-DCM ಡಿಕೆ ಶಿವಕುಮಾರ್ ಅವರು, ಕರ್ನಾಟಕ ಕಾಂಗ್ರೆಸ್ ಆಂತರಿಕ ಕಲಹದ ವದಂತಿಗಳ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಿನ್ನೆ ಪಕ್ಷದ ಹಿರಿಯ ನಾಯಕರ ನಿವಾಸಕ್ಕೆ ಭೇಟಿ ನೀಡಿದ್ದೆ. ಜಗಳ ಇತ್ತು ಅದಕ್ಕೆ ಹೋಗಿದ್ದರು ಎಂದು ನೀವು ಹೇಳುತ್ತಿದ್ದೀರಿ. ಫಿರೋಜ್ ಸೇಠ್ ಹಿರಿಯರು, ಅವರ ಜತೆ ಕೆಲಸ ಮಾಡಿದ್ದೇವೆ. ಸಂಘಟನೆ ದೃಷ್ಟಿಯಿಂದ ನಿವಾಸಕ್ಕೆ ಹೋಗಿ ಬಂದಿದ್ದೆ ಎಂದರು.
ಸುರ್ಜೇವಾಲ ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುತ್ತಿಲ್ಲ. ಅವರ ಬಗ್ಗೆ ರಾಹುಲ್ ಗಾಂಧಿಯವರಿಗೆ ದೂರು ನೀಡಬೇಕು. ರಾಜ್ಯ ಉಸ್ತುವಾರಿಯಿಂದ ವಾಪಸ್ ಕರೆಸಿಕೊಳ್ಳುವಂತೆ ಒತ್ತಡ ಹೇರಬೇಕು’ ಎಂದು ಸಿಎಂ ಸಿದ್ದರಾಮಯ್ಯಗೆ ಕೆಲವು ಮಂದಿ ಸಚಿವರು ಆಗ್ರಹಿಸಿದ್ದಾರೆ ಎನ್ನಲಾಗಿತ್ತು.
ಬೆಳಗಾವಿಯಲ್ಲಿ ನಾಳೆ ಗಾಂಧಿ ಭಾರತ ಕಾರ್ಯಕ್ರಮ ಪ್ರಯುಕ್ತ ದೆಹಲಿ ಹಾಗೂ ದೇಶದ ಮೂಲೆ ಮೂಲೆಯ ನಾಯಕರ ಜತೆ ಸಂಪರ್ಕದಲ್ಲಿದ್ದೆ. ಸುಮಾರು ಅರವತ್ತು ಜನ ಬೇರೆ ಬೇರೆ ಕಡೆಯಿಂದ ಬರುತ್ತಿದ್ದಾರೆ. ಬಹುತೇಕ ಎಲ್ಲ ಶಾಸಕರು, ಎಂಎಲ್ಸಿಗಳು ಬರುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಬರುವುದು ಖಚಿತವಾಗಿದೆ. ಜೈ ಭೀಮ್, ಜೈ ಗಾಂಧಿ, ಜೈ ಸಂವಿಧಾನ ಸಮಾವೇಶದ ಮೂಲಕ ಮಹಾತ್ಮ ಗಾಂಧಿ, ಅಂಬೇಡ್ಕರ್ ಸ್ಮರಣೆ ಮಾಡುವುದು ಹಾಗೂ ಸಂವಿಧಾನ ರಕ್ಷಣೆ ನಮ್ಮ ಮೂಲ ಉದ್ದೇಶವಾಗಿದ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






