ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ವಾರ್ನ್: ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಸುಲಿಗೆ ಮಾಡದಂತೆ ಎಚ್ಚರಿಕೆ!

ಅಕ್ಟೋಬರ್ 15, 2024 - 20:09
 0  22
ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ವಾರ್ನ್: ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಸುಲಿಗೆ ಮಾಡದಂತೆ ಎಚ್ಚರಿಕೆ!

ಬೆಂಗಳೂರು:- ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ವಾರ್ನ್ ಮಾಡಿದ್ದು, ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಸುಲಿಗೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. 

2025ನೇ ಶೈಕ್ಷಣಿಕ ಪ್ರವೇಶಕ್ಕೆ ಈಗಿಂದಲೇ ಮುಗಿಬಿದ್ದ ಶಾಲೆಗಳು ಪ್ರವೇಶ ಶುಲ್ಕ, ಸ್ಕಾಲರ್ ಶಿಪ್, ಸೇರಿ ವಿವಿಧ ಬಗೆಯ ಆಫರ್ ಕೊಟ್ಟು ಪೋಷಕರನ್ನ ಸೆಳೆಯುತ್ತಿವೆ. ಬೆಂಗಳೂರಿನ ಕೆಲವು ಪ್ರತಿಷ್ಟಿತ ಶಾಲೆಗಳಿಂದ ಆಫರ್ ಶುರುವಾಗಿದೆ. ಈಗಲೇ ದಾಖಲಾತಿ ಮಾಡಿ 30%, 50% ಶುಲ್ಕ ವಿನಾಯತಿ ಕೊಡ್ತೀವಿ ಅಂತಾ ಆಫರ್ ಶುರು ಮಾಡಿಕೊಂಡು ಸೀಟ್ ಬ್ಲಾಕ್ ಮಾಡಿಕೊಂಡು ದಾಖಲಾತಿ ಮಾಡ್ತೀವೆ ಇದು ಪೋಷಕರ ಪರದಾಟಕ್ಕೆ ಕಾರಣವಾಗಿತ್ತು. ಈಗ ಇತಂಹ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಚಾಟಿ ಬೀಸಿದೆ.

ಹೇಳ್ದೆ ಕೇಳ್ದೆ ಪೋಷಕರ ಬಳಿ ಇನ್ಮುಂದೆ ಶುಲ್ಕ ಪಡೆದು ದಾಖಲಾತಿ ಮಾಡಂಗಿಲ್ಲ. ಮುಂಚಿತವಾಗಿ ಸೀಟ್ ಬ್ಲಾಕ್ ಮಾಡಿ ಹಣ ಪಡೆದು ದಾಖಲಾತಿ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್ ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಕೆಲವು ವರ್ಷಗಳಿಂದ ರಾಜಧಾನಿಯಲ್ಲಿ ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆಗಳು 6 ತಿಂಗಳು ಮುಂಚಿತವಾಗಿಯೇ ಮುಂದಿನ ವರ್ಷದ ಸೀಟ್ ಬ್ಲಾಕಿಂಗ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಮೊದಲೆ ಪೋಷಕರ ಬಳಿ ಶುಲ್ಕ ಕಟ್ಟಿಸಿಕೊಂಡು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ದಾಖಲಾತಿ ನೀಡ್ತಾ ಇದ್ದಾರೆ..

ಮುಂಚಿತ ಸೀಟ್ ನೋಂದಣಿ ಮಾಡಿಸಿದ್ರೆ 10,000 – 25000 ಸಾವಿರ ರಿಯಾಯಿತಿ ಅಂತ ಆಫರ್ ಕೂಡಾ ಕೊಡ್ತೀದ್ದಾರೆ. ಸರ್ಕಾರದ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ದಾಖಲಾತಿ ಮಾಡ್ತೀದ್ದಾರೆ. ಆದ್ರೆ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಾರಂಭಕ್ಕೂ ಮುಂಚೆ ಶುಲ್ಕ ಸ್ವೀಕರಿಸುವಂತಿಲ್ಲ. ದಾಖಲಾತಿ ಮಾಡುವಂತಿಲ್ಲ. ಒಂದು ವೇಳೆ ಪ್ರವೇಶ ಶುಲ್ಕ ಸಂಗ್ರಹಿಸಿದರೆ ಅದು ಕಾನೂನು ಉಲ್ಲಂಘನೆ. ಹೀಗಾಗಿ ಈಗ ಶಾಲಾ ಶಿಕ್ಷಣ ಇಲಾಖೆ ಕಾನಾನು ಉಲ್ಲಂಘಿಸುವ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow