ಖ್ಯಾತ ಕಿರುತೆರೆ ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಗಂಭೀರ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಮೇ 1, 2025 - 18:16
 0  15
ಖ್ಯಾತ ಕಿರುತೆರೆ ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಗಂಭೀರ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಖ್ಯಾತ ಕಿರುತೆರೆ ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ ನಡೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ನಟಿಯ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ಅವರ ತಂಗಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಈ ಘಟನೆ ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ನಡೆದಿದೆ. ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ನಾಗರಾಜ್ ಮತ್ತು ತಾಯಿ ವಾಸವಾಗಿದ್ದಾರೆ. ಸುಧಾ ನಾಗರಾಜ್ ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ಗ್ರೌಂಡ್ ಫ್ಲೋರ್​ನ ಪಾರ್ಕಿಂಗ್ ಜಾಗದಲ್ಲಿ ಹಲವು ವರ್ಷಗಳಿಂದ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ತಂಗಿ ಮಂಗಳ, ನಿನ್ನೆ ಪತಿಯ ಜೊತೆ ಸೇರಿ ಅಕ್ಕ ಸುಧಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ


ಆದರೆ, ನಿನ್ನೆ ರಾತ್ರಿ ಮನೆಯ ಮುಂದಿನ ಜಾಗದ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ಸುಧಾ ನಾಗರಾಜ್ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ಚೇತರಿಕೆ ನಂತರ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ

ಇನ್ನು ನಟಿ ಲಾಸ್ಯ ನಾಗರಾಜ್ ಸದ್ಯ ಕೆನಡಾದಲ್ಲಿದ್ದು, ತಾಯಿಯ ಮೇಲೆ ಆಗಿರುವ ಹಲ್ಲೆ ಸುದ್ದಿಯನ್ನ ಅವರೇ ಬಹಿರಂಗಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow