ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದರೆ ಶುಭವೋ.? ಅಶುಭವೋ.? ಇಲ್ಲಿದೆ ಮಾಹಿತಿ

ನೆಮ್ಮದಿಯಿಂದ ಜೀವನ ಮಾಡಲು ತಮ್ಮದೇ ಆದ ಒಂದು ಸ್ವಂತ ಮನೆಗಳು ಇರಬೇಕು ಎಂದು ಎಲ್ಲರೂ ಆಸೆ ಪಡ್ತಾರೆ. ಅಷ್ಟೇ ಅಲ್ಲ, ಆ ಮನೆಯಲ್ಲಿ ಸದಾ ಸುಖ-ಸಂತೋಷ, ನೆಮ್ಮದಿ ಇರಬೇಕು ಎಂದು ಆಸೆ ಪಡ್ತಾರೆ. ಸುಖ ನೆಮ್ಮದಿ ಬೇಕು ಅಂದ್ರೆ ನಾವು ಕಟ್ಟುವ ಮನೆಯ ವಾಸ್ತು ಸರಿ ಇರಬೇಕು ಎನ್ನಲಾಗುತ್ತೆ. ಯಾವುದೇ ಮನೆ ಕಟ್ಟುವಾಗಲೂ ವಾಸ್ತು ನೋಡಿಯೇ ಕಟ್ಟುತ್ತಾರೆ.
ಇದು ಹಿಂದಿನ ಕಾಲದಿಂದಲೂ ನೆಡೆದುಕೊಂಡು ಬಂದಿರುವ ಪದ್ಧತಿ ಮತ್ತು ನಂಬಿಕೆ. ಮನುಷ್ಯನು ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕು ಎಂದರೆ ಪ್ರಕೃತಿಯಲ್ಲಿ ಇರುವ ಕೆಲವು ಪ್ರಾಣಿ-ಪಕ್ಷಿಗಳನ್ನು ಅವಲಂಬಿಸಬೇಕು. ಹೌದು, ನಿಸರ್ಗದ ಮಡಿಲಲ್ಲಿ ಇರುವ ಕೆಲವು ಪ್ರಾಣಿ ಪಕ್ಷಿಗಳು ದೈವ ಸಂಭೂತ ಹಾಗೂ ಧನಾತ್ಮಕ ಶಕ್ತಿಗಳ ರೂಪ ಎಂದು ಸಹ ನಂಬಲಾಗುತ್ತದೆ.
ಹಿಂದಿನ ಕಾಲದಲ್ಲಿ ಕೆಲವು ಪ್ರಾಣಿ-ಪಕ್ಷಿಗಳ ವರ್ತನೆ ಹಾಗೂ ಸೂಚನೆಯ ಅನುಸಾರವಾಗಿಯೇ ಭವಿಷ್ಯದಲ್ಲಿ ಸಂಭವಿಸಬಹುದಾದ ಸಂಗತಿಗಳನ್ನು ಊಹಿಸುತ್ತಿದ್ದರು. ಕೆಲವು ಪ್ರಾಣಿ ಪಕ್ಷಿಗಳ ಕೂಗು, ವರ್ತನೆಯು ಶುಭ ಅಥವಾ ಅಶುಭ ಸೂಚಕವೆಂಬುದು ಹಿಂದಿನಕಾಲದಿಂದಲೂ ಅನುಸರಿಸಿಕೊಂಡು ಬಂದ ಮೂಢನಂಬಿಕೆಗಳು. ಅಂತಹ ಕೆಲವು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ನಂಬಿಕೆಗಳನ್ನು ಕೆಳಗೆ ವಿವರಿಸಲಾಗಿದೆ.
ಗುಬ್ಬಚ್ಚಿಯ ಗೂಡು
ಗುಬ್ಬಚ್ಚಿ ಮನೆಯ ಒಂದು ಮೂಲೆಯಲ್ಲಿ ಗೂಡನ್ನು ನಿರ್ಮಿಸಲು ಒಂದು ಮೂಲೆಯನ್ನು ಆಯ್ಕೆ ಮಾಡಿಕೊಂಡರೆ ಅದು ನಿಮಗೆ ಹೊಸ ಚಿಂತೆ ಸಮೀಪಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಮನೆಯ ಸುತ್ತ-ಮುತ್ತ ಗುಬ್ಬಿ ಕೂಗುವುದು ಶುಭವನ್ನು ಹಾಗೂ ಅದೃಷ್ಟವನ್ನು ಸೂಚಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರ ಕೂಡ ಗುಬ್ಬಿ ಬಹಳ ಶುಭ ಮತ್ತು ಸಕಾರಾತ್ಮಕತೆಯ ಸಂಕೇತ ಎಂದು ಹೇಳುತ್ತದೆ. ಇದು ಸಾಮಾನ್ಯವಾಗಿ ಯಾರ ದೃಷ್ಟಿಯೂ ಬೀಳದ ಕಡೆ ಅಥವಾ ಮರದ ಮೇಲೆ ತನ್ನ ಗೂಡನ್ನು ಕಟ್ಟುತ್ತದೆ. ಗುಬ್ಬಿ ಯಾರ ಮನೆಯಲ್ಲಿ ಗೂಡು ಕಟ್ಟುತ್ತೋ ಆ ಮನೆಗೆ ದೇವಿ ಲಕ್ಷ್ಮಿಯ ಕೃಪೆ ಸದಾ ಇರುತ್ತೆ, ಧನಲಾಭವಾಗುತ್ತೆ ಎಂದು ಜ್ಯೋತಿಷ್ಯ ಹೇಳುತ್ತದೆ. ಗುಬ್ಬಿಯ ಗೂಡು ಮನೆಯಲ್ಲಿರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹುಟ್ಟುತ್ತದೆ.
ತನ್ನ ಪರಿವಾರದ ಪಾಲನೆಗಾಗಿ ಗುಬ್ಬಿಗಳು ಮನೆಯಲ್ಲಿ ಗೂಡು ಕಟ್ಟುತ್ತವೆ. ಹೀಗೆ ಅವು ಮನೆಯಲ್ಲಿ ಗೂಡು ಕಟ್ಟುವುದು ಮನೆಗೆ ಸುಖ, ಸಮೃದ್ಧಿಯ ಆಗಮನದ ಸೂಚನೆಯಾಗಿದೆ. ಇದು ಮನೆಯವರ ಸಕಲ ಸೌಭಾಗ್ಯ ದೊರಕುವುದರ ಪ್ರತೀಕ ಎಂದು ಕೂಡ ಹೇಳಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಗುಬ್ಬಿ ಮನೆಯ ಪೂರ್ವ ದಿಕ್ಕಿಗೆ ಗೂಡು ಕಟ್ಟಿದರೆ ಸಮಾಜದಲ್ಲಿ ಆ ಮನೆಯವರ ಸ್ಥಾನಮಾನ ಉನ್ನತಮಟ್ಟಕ್ಕೆ ಏರುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗುಬ್ಬಿ ಗೂಡು ಕಟ್ಟಿದರೆ ಮನೆಯ ಮಕ್ಕಳಿಗೆ ಶೀಘ್ರದಲ್ಲೇ ವಿವಾಹವಾಗುತ್ತದೆ ಎಂದರ್ಥ.
ನಿಮ್ಮ ಪ್ರತಿಕ್ರಿಯೆ ಏನು?






