ಬಿಗ್ ಬಾಸ್ ಗೆ ರೀ ಎಂಟ್ರಿ ಕೊಟ್ಟ ನಮ್ರತಾ-ಕಾರ್ತಿಕ್! ಹೇಗಿದೆ ಸ್ಪರ್ಧಿಗಳ ರಿಯಾಕ್ಷನ್!

ಡಿಸೆಂಬರ್ 10, 2024 - 20:12
 0  13
ಬಿಗ್ ಬಾಸ್ ಗೆ ರೀ ಎಂಟ್ರಿ ಕೊಟ್ಟ ನಮ್ರತಾ-ಕಾರ್ತಿಕ್! ಹೇಗಿದೆ ಸ್ಪರ್ಧಿಗಳ ರಿಯಾಕ್ಷನ್!

ಬಿಗ್ ಬಾಸ್ ಮನೆಗೆ ನಿನ್ನೆ ತಾನೇ ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಭೇಟಿ ನೀಡಿ ಮನರಂಜಿಸಿದರು. ಅಲ್ಲದೇ ಹಂತಹಂತವಾಗಿ ಎಲಿಮಿನೇಷನ್ ಟಾಸ್ಕ್ ಕೂಡ ಕೊಟ್ಟರು. ಇದೀಗ ಬಿಗ್ ಬಾಸ್ 10ರ ವಿನ್ನರ್ ಕಾರ್ತಿಕ್ ಹಾಗೂ ನಮ್ರತಾ ಅವರು ಭೇಟಿ ನೀಡಿದ್ದಾರೆ. 

ಮನೆಯಲ್ಲಿ ಇರೋರನ್ನ ಬೂಸ್ಟ್ ಮಾಡಲೆಂದೇ ಬಿಗ್ ಬಾಸ್ ಸೀನಿಯರ್‌ಗಳನ್ನ ಮನೆಯೊಳಗೆ ಬಿಟ್ಟಿದ್ದಾರೆ. ಆದರೆ, ಇದರಿಂದ ಮನೆಯಲ್ಲಿ ಒಂದು ಕಡೆಗೆ ಖುಷಿ ಇದೆ. ಮತ್ತೊಂದು ಕಡೆಗೆ ಜಗಳ ಮೋಡ್‌ ಅಲ್ಲಿಯೇ ಸ್ಪರ್ಧಿಗಳಿದ್ದಾರೆ. ಈ ಸ್ಪರ್ಧಿಗಳ ಆಟದ ಇನ್ನಷ್ಟು ವಿವರ ಇಲ್ಲಿದೆ ಓದಿ

ನಮ್ರತಾ ಗೌಡ ಮತ್ತು ಕಾರ್ತಿಕ್ ಮನೆಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ಇವರ ಆಗಮನದಿಂದ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಪೀಕ್‌ಗೆ ಹೋಗಿದೆ. ಆದರೆ, ಇವರು ಸ್ಪರ್ಧಿಗಳಾಗಿ ಏನೂ ಬಂದಿಲ್ಲ ಬಿಡಿ. ಮನೆಯಲ್ಲಿರೋ ಸ್ಪರ್ಧಿಗಳನ್ನ ಬೂಸ್ಟ್ ಮಾಡಲು ಬಂದಿದ್ದಾರೆ. ಈ ವಿಚಾರ ಗೊತ್ತೇ ಇದೆ.

ಮನೆಯಲ್ಲಿ ಗ್ರೋಸರಿ ಟಾಸ್ಕ್ ಆಗುತ್ತದೆ. ಅದನ್ನ ಗೆಲ್ಲೋಕೆ ರಜತ್ ಕಿಶನ್ ಕಾರಣ ಅಂತ ತ್ರಿವಿಕ್ರಮ್ ಹೇಳ್ತಾರೆ. ಆದರೆ, ಇದರಿಂದ ಧನರಾಜ್ ಬೇಸರಗೊಳ್ತಾರೆ. ರಜತ್ ವಿರುದ್ಧ ತಿರುಗಿ ಬಿರ್ತಾರೆ. ನಾಮಿನೇಷನ್ ಕೂಡ ಮಾಡ್ತಾರೆ. ಹಾಗಾಗಿಯೇ ಇಬ್ರ ನಡುವೆ ಜಗಳ ಕೂಡ ಆಗುತ್ತದೆ.

ಆದರೆ, ಇವರ ಜಗಳ ತೀವ್ರತೆ ಪಡೆಯುತ್ತದೆ. ರಜತ್ ಇಲ್ಲಿ ಧನುಗೆ ಮಗು ಅಂತಾರೆ. ಧನು ಏನೂ ಸಮ್ನೆ ಇರೋದಿಲ್ಲ. ಅಂಕಲ್ ಅಂತಲೇ ರಜತ್ ಗಲ್ಲ ಹಿಡಿದು ಇರಿಟೇಟ್ ಮಾಡ್ತಾರೆ. ಆಗಲೇ ಇಬ್ಬರ ನಡುವೆ ಭಯಂಕರ ಜಗಳ ಶುರು ಆಗುತ್ತದೆ. ಆಗಲೇ ಕ್ಯಾಪ್ಟನ್ ಗೌತಮಿ ಬರ್ತಾರೆ. ಉಗ್ರಂ ಮಂಜು ಬಂದು ಈ ಜಗಳವನ್ನ ಬಿಡಿಸುತ್ತಾರೆ ಅಂತಲೇ ಹೇಳಬಹುದು.

ದೊಡ್ಮನೆಯಲ್ಲಿ ಗೆಸ್ಟ್‌ಗಳ ಆಗಮನ ಜೋರಾಗಿದೆ. ಕಾರ್ತಿಕ್-ನಮ್ರತಾ ಒಟ್ಟಿಗೆ ಬಂದಾಗಿದೆ. ಆಟವನ್ನೂ ಆಡಿಸ್ತಿದ್ದಾರೆ. ಡ್ರೋನ್ ಪ್ರತಾಪ್ ಕೆಲಸ ಕೊಡ್ತಾರೆ. ತುಕಾಲಿ ಸಂತು-ವರ್ತೂರ್ ಸಂತು ಮಾತು ಎಂದಿನ ಮಾತು ಮುಂದುವರೆಸಿದ್ದಾರೆ. ತನಿಷಾ ಇಲ್ಲಿ ಹನುಮಂತನ ಜೊತೆಗೆ ಕುಣಿದು ಕುಪ್ಪಳ್ಳಿಸಿದ್ದಾರೆ. ಹೀಗೆ ಮನೆಯಲ್ಲಿ ಒಂದು ಹೊಸ ವಾತಾವರಣ ಇದೆ.

ಆದರೆ, ನಾಮಿನೇಷನ್ ಪ್ರಕ್ರಿಯೆ ಇಲ್ಲಿ ಬೇರೆ ರೀತಿಯ ಹೀಟ್ ಕ್ರಿಯೇಟ್ ಮಾಡುತ್ತಿದೆ. ಎಲ್ಲರೂ ಮನೆಯಲ್ಲಿ ಉಳಿಯಬೇಕು ಅಂತಲೇ ಹೋರಾಡ್ತಿದ್ದಾರೆ. ಮಾಡೋ ತಪ್ಪುಗಳಿಂದಲೇ ನಾಮಿನೇಟ್ ಕೂಡ ಆಗುತ್ತಿದೆ. ಕಳೆದ ವಾರ ಯಾರೂ ಮನೆಯಿಂದ ಹೋಗ್ಲಿಲ್ಲ. ಆದರೆ, ಈ ವಾರ ಯಾರು ಹೋಗ್ತಾರೆ ಅನ್ನುವ ಪ್ರಶ್ನೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow