ಖ್ಯಾತ ಬಾಲಿವುಡ್ ನಟ ಸತೀಶ್ ಶಾ ನಿಧನ
ಹಿಂದಿ ಚಿತ್ರರಂಗ ಹಾಗೂ ಟಿವಿ ಲೋಕದ ಜನಪ್ರಿಯ ನಟ ಸತೀಶ್ ಶಾ ಇಂದು (ಅಕ್ಟೋಬರ್ 25) ಮುಂಬೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸತೀಶ್ ಶಾ ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು.
ಪಂಕಜ್ ಧೀರ್ ನಿಧನದ ಬಳಿಕ ಮತ್ತೊಂದು ಆಘಾತ
ಇತ್ತೀಚೆಗಷ್ಟೆ ನಟ ಪಂಕಜ್ ಧೀರ್ ನಿಧನ ಹೊಂದಿದ್ದ ಸುದ್ದಿ ಮನರಂಜನಾ ಲೋಕವನ್ನು ದುಃಖಕ್ಕೊಳಪಡಿಸಿದ್ದರೆ, ಈಗ ಸತೀಶ್ ಶಾ ಅವರ ಅಗಲಿಕೆ ಮತ್ತೊಂದು ಆಘಾತ ತಂದಿದೆ.
ಅರ್ಧ ಶತಮಾನದ ಅಭಿನಯಯಾನ
1970ರ ದಶಕದಲ್ಲಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಸತೀಶ್ ಶಾ, ಹಲವು ಹಾಸ್ಯ ಹಾಗೂ ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದರು. ‘ಮೇ ಹೂ ನಾ’, ‘ಜಾನೆ ಬಿ ದೋ ಯಾರೋ’, ‘ಹಮ್ ಆಪ್ಕೆ ಹೈ ಕೋನ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ಪಾತ್ರಗಳು ಇಂದಿಗೂ ನೆನಪಾಗುತ್ತವೆ.
ಟಿವಿ ಲೋಕದಲ್ಲೂ ಜನಪ್ರಿಯ ಹೆಸರು
ಹಾಸ್ಯ ಧಾರಾವಾಹಿ ‘ಸಾರಾಭಾಯಿ vs ಸಾರಾಭಾಯಿ’ ಯಲ್ಲಿ ಅವರು ನಿರ್ವಹಿಸಿದ ಮಾಯೂರ ಸಾರಾಭಾಯಿ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿತ್ತು.
ಕನ್ನಡದಲ್ಲೂ ನಟಿಸಿದ ಸತೀಶ್ ಶಾ
ತಮಿಳು ನಟ ಮಾಧವನ್, ಅಬ್ಬಾಸ್ ಮತ್ತು ಪ್ರೇಮಾ ಅಭಿನಯಿಸಿದ ಕನ್ನಡದ ‘ಶಾಂತಿ ಶಾಂತಿ ಶಾಂತಿ’ ಸಿನಿಮಾದಲ್ಲೂ ಸತೀಶ್ ಶಾ ನಟಿಸಿದ್ದರು. ಇದಲ್ಲದೆ, ಅವರು ಎರಡು ಮರಾಠಿ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?