ತಲ್ವಾರ್ʼನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ! ಪಟಾಕಿ ಸಿಡಿಸಿ ಯುವಕರ ಹುಚ್ಚಾಟ

ತುಮಕೂರು: ಯುವಕರು ತಲ್ವಾರ್ʼನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ. ಶಾರುಖ್, ಮುಗಲ್ ಪಾಷ ಎಂಬ ಯುವಕರು ರಸ್ತೆ ಮಧ್ಯದಲ್ಲಿ ನಿಂತು ತಲ್ವಾರ್ನಿಂದ ಕೇಕ್ ಕತ್ತರಿಸಿದ್ದಾರೆ. ಅಲ್ಲದೇ, ನಡು ರಸ್ತೆಯಲ್ಲೇ ಪಟಾಕಿ ಪಟಾಕಿ ಸಿಡಿಸಿದ್ದು, ಸವಾರರಿಗೆ ತೊಂದರೆಯಾಯಿತು.
ತಲ್ವಾರ್ನಿಂದ ಕೇಕ್ ಕತ್ತರಿಸಿದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾತಾಣದಲ್ಲಿ ಈ ವಿಡಿಯೋ ಹರಿಬಿಟ್ಟಿದ್ದು, ಮೈ ಕಿಂಗ್ ಬರ್ತಡೆ ಎಂದು ಕ್ಯಾಪ್ಶನ್ ಅಂತ ಹಾಕಿಕೊಂಡಿದ್ದಾರೆ. ಯುವಕರ ಹುಟ್ಟುಹಬ್ಬ ಆಚರಣೆಗೆ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






