"ದಾಸ"ನಿಗೆ ಜೈಲಿನಲ್ಲಿ ಸಿಕ್ತು ಹಾಸಿಗೆ, ದಿಂಬು! ವಿಷ ಕೊಡಿ ಎಂದ ನಟ ದರ್ಶನ್‌'ಗೆ ಕೊಂಚ ರಿಲೀಫ್‌

ಸೆಪ್ಟೆಂಬರ್ 9, 2025 - 16:03
 0  23
"ದಾಸ"ನಿಗೆ ಜೈಲಿನಲ್ಲಿ ಸಿಕ್ತು ಹಾಸಿಗೆ, ದಿಂಬು! ವಿಷ ಕೊಡಿ ಎಂದ ನಟ ದರ್ಶನ್‌'ಗೆ ಕೊಂಚ ರಿಲೀಫ್‌

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ಯಾಂಗ್ ಅನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ವಜಾ ಮಾಡಿದೆ.ಇದರಿಂದಾಗಿ ದರ್ಶನ್ ಆ್ಯಂಡ್ ಗ್ಯಾಂಗ್ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯಲಿದೆ.

ಹೌದು ನಟ ದರ್ಶನ್‌ಗೆ ಬೆಂಗಳೂರು ಸೆಷನ್ಸ್ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಅಲ್ಲದೆ, ದರ್ಶನ್‌ಗೆ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡಲು ಅನುಮತಿ ನೀಡಲಾಗಿದೆ. ಜೈಲಿನ ಆವರಣದಲ್ಲಿ ಓಡಾಡಲು ಸಹ ಅನುಮತಿ ನೀಡಿರುವ ನ್ಯಾಯಾಲಯ, “ಜೈಲು ಕೈಪಿಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಸೂಚನೆ ನೀಡಿದೆ.

A2 ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಯಾವುದೇ ಸಕಾರಣಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಆದೇಶದಂತೆ, ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿ ಕ್ರಮ ಕೈಗೊಳ್ಳಬಹುದು. ಅಗತ್ಯವಿದ್ದರೆ ಬೇರೆ ಜೈಲಿಗೆ ಸ್ಥಳಾಂತರಿಸುವ ಅವಕಾಶವೂ ಇದೆ ಎಂದು ಕೋರ್ಟ್ ತಿಳಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow