"ದುಷ್ಟರಿರುವರು ದೇಶದೊಳಗಯ್ಯ": ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗುವಿನ ಖಾಸಗಿ ಭಾಗಕ್ಕೆ ಹಾನಿ ಮಾಡಿದ ಧುರುಳರು!

ಡಿಸೆಂಬರ್ 6, 2024 - 09:18
 0  17
"ದುಷ್ಟರಿರುವರು ದೇಶದೊಳಗಯ್ಯ": ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗುವಿನ ಖಾಸಗಿ ಭಾಗಕ್ಕೆ ಹಾನಿ ಮಾಡಿದ ಧುರುಳರು!

ಅದು ಪುಟ್ಟ ಕಂದ. ಪ್ರಪಂಚಕ್ಕೆ ಕಾಲಿಟ್ಟು ಜಸ್ಟ್ 24 ತಿಂಗಳು ಕಳೆದಿದೆ ಅಷ್ಟೇ. ಅದಕ್ಕೇನು ಸರಿ ತಪ್ಪು ಗೊತ್ತಾಗುತ್ತಾ. ಪುಟ್ಟ-ಪುಟ್ಟ ಹೆಜ್ಜೆ ಇಡುತ್ತಾ, ತೊದಲು ಮಾತಾಡುತ್ತಿದ್ದ 2 ವರ್ಷದ ಕಂದನ ಖಾಸಗಿ ಅಂಗಕ್ಕೆ ಧುರುಳರು ಹಾನಿ ಮಾಡಿರೋ ಘಟನೆ ಜರುಗಿದೆ. 

ತಿರುವನಂತಪುರಂನಲ್ಲಿರುವ ಶಿಶು ಪಾಲನಾ ಕೇಂದ್ರದಲ್ಲಿ ಎರಡೂವರೆ ವರ್ಷದ ಮಗು ರಾತ್ರಿ ಮಲಗಿದ್ದಾಗ ಮೂತ್ರ ಮಾಡಿಕೊಂಡಿತ್ತು. ಅದಕ್ಕೆ ಸಿಟ್ಟಿಗೆದ್ದ ಮೂವರು ಸಿಬ್ಬಂದಿ ಮಗುವನ್ನು ಥಳಿಸಿದ್ದಲ್ಲದೆ ಅದರ ಖಾಸಗಿ ಭಾಗಗಳಿಗೆ ಗಾಯ ಮಾಡಿದ್ದಾರೆ.

ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯಿಂದ ನಡೆಸಲ್ಪಡುವ ಕೇಂದ್ರದಿಂದ ಮೂವರು ಆಯಾಗಳನ್ನು ಬಂಧಿಸಲಾಗಿದೆ. ಕೆಲ ದಿನಗಳ ಬಳಿಕ ಮಗು ಅಸ್ವಸ್ಥವಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಖಾಸಗಿ ಭಾಗಗಳಲ್ಲಿ ಗಾಯದ ಗುರುತಿರುವುದು ಪತ್ತೆಯಾಗಿದೆ. ಅದು ಸುಮಾರು ಏಳೆಂಟು ದಿನದ ಹಿಂದಿನದು ಎಂದು ತಿಳಿದುಬಂದಿದೆ

ಆಸ್ಪತ್ರೆ ವೈದ್ಯರು ಈ ಸಮಸ್ಯೆಯನ್ನು ಇಲ್ಲಿಗೆ ಬಿಡಲಿಲ್ಲ, ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಮಗು ಮೂತ್ರ ಮಾಡಿತೆಂದು ಆಯಾಗಳು ಮಗುವಿಗೆ ಥಳಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಮೂವರು ಆಯಾಗಳನ್ನು ಕೆಲಸದಿಂದ ವಜಾ ಮಾಡಿದ್ದಷ್ಟೇ ಅಲ್ಲದೆ ಪೋಕ್ಸೊ ಕಾಯ್ದೆಯಲ್ಲಿ ಬಂಧಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow