ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್: 59 ಸಾವಿರ​ ಖಾತೆಗಳು ಬ್ಲಾಕ್​! ನಿಮ್ಮದು ಆಗಿದ್ಯಾ ಚೆಕ್ ಮಾಡಿ!

ಡಿಸೆಂಬರ್ 6, 2024 - 08:09
 0  10
ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್: 59 ಸಾವಿರ​ ಖಾತೆಗಳು ಬ್ಲಾಕ್​! ನಿಮ್ಮದು ಆಗಿದ್ಯಾ ಚೆಕ್ ಮಾಡಿ!

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್ ಕೊಟ್ಟಿರುವ ಕೇಂದ್ರ ಗೃಹ ಇಲಾಖೆಯು, ಬರೋಬ್ಬರಿ 59 ಸಾವಿರ​ ಖಾತೆಗಳನ್ನು ಬ್ಲಾಕ್​ ಮಾಡಿದೆ. 

ಡಿಜಿಟಲ್​ ವಂಚನೆಗೆ ಮರ್ಮಾಘಾತ ಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್​ಗಳ ಪ್ರಕರಣಗಳ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದ ಕೇಂದ್ರ ಗೃಹ ಇಲಾಖೆ ಒಟ್ಟು 59 ಸಾವಿರ ವಾಟ್ಸಾಪ್​ ಹಾಗೂ 1700 ಸ್ಕೈಪ್​ ಐಡಿಗಳನ್ನು ಪತ್ತೆ ಮಾಡಿ ಬ್ಲಾಕ್ ಮಾಡಿದೆ.

ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಬಂಡಿ ಸಂಜಯ್​ ಕುಮಾರ್ ಅವರು ಈ ಬಗ್ಗೆ ಮಾಹಿತಿ ಕೊಟ್ಟಿದ್ದು, ಸಿಟಿಜಿನ್ ಫೈನಾನ್ಸಿಷಿಯಲ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೆಜ್ಮೆಂಟ್ ಸಿಸ್ಟಮ್​ನ್ನು 14 ಸಿ ಅಡಿಯಲ್ಲಿ 2021ರಲ್ಲಿ ಲಾಂಚ್ ಮಾಡಲಾಗಿತ್ತು. ಹಣಕಾಸಿನ ವಂಚನೆ ನಡೆದಾಗಲೆಲ್ಲಾ ಕೂಡಲೇ ಕ್ರಮ ಕೈಗೊಂಡು ನಾಗರಿಕರ ಹಣವನ್ನು ಉಳಿಸಲಾಗಿದೆ. ಈ ಒಂದು ಇಲಾಖೆಗೆ ಒಟ್ಟು 9.94 ಲಕ್ಷ ದೂರುಗಳು ಬಂದಿದ್ದವು. ದೂರಿನನ್ವಯ ಒಟ್ಟು 3,431 ಕೋಟಿ ರೂಪಾಯಿ ನಾಗರಿಕರ ಹಣವನ್ನು ಸುರಕ್ಷಿತವಾಗಿ ಕಾಪಾಡಲಾಗಿದೆ ಎಂದರು. 

14ಸಿ ಸದ್ಯ ಡಿಜಿಟಲ್ ವಂಚನೆಯನ್ನು ಮಾಡುತ್ತಿದ್ದ 1700 ಸ್ಕೈಪ್ ಐಡಿಗಳನ್ನು ಹಾಗೂ 59 ಸಾವಿರ ವಾಟ್ಸಾಪ್​ ಖಾತೆಗಳನ್ನು ಗುರುತಿಸಿ ಅವುಗಳನ್ನು ಸದಾಕಾಲಕ್ಕೆ ಬ್ಲಾಕ್ ಮಾಡಲಾಗಿದೆ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.

ನವೆಂಬರ್ 15 2024ರವರೆಗೆ ಒಟ್ಟು 6.69 ಲಕ್ಷ ಸಿಮ್​ಕಾರ್ಡ್​ ಹಾಗೂ 1.32 ಲಕ್ಷ ಐಎಇಐ ನಂಬರ್​ಗಳನ್ನು ಪೊಲೀಸ್​ ಅಧಿಕಾರಿಗಳು ವರದಿ ಮಾಡಿದ್ದರು. ಅವುಗಳನ್ನೆಲ್ಲಾ ಈಗ ಬ್ಲಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಗೃಹ ಸಚಿವಾಲಯ ಸೈಬರ್ ಕ್ರೈಂ ಹಾಗೂ ಡಿಜಿಟಲ್ ಪ್ರಾಡ್​ಗಳನ್ನ ತಡೆಹಿಡಿಯುವಲ್ಲಿ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ಟಿಲಿಕಾಂ ಸರ್ವಿಸ್​ ಪ್ರೊವೈಡರ್ಸ್ ಅಂತಾರಾಷ್ಟ್ರೀಯ ವಂಚನೆಯ ಕರೆಗಳನ್ನು ಗುರುತಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇತ್ತೀಚಿನ ಡಿಜಿಟಲ್ ಅರೆಸ್ಟ್​ ಪ್ರಕರಣಗಳಲ್ಲಿ ಸೈಬರ್ ವಂಚಕರು ಇಂತಹ ಕರೆಗಳ ಸಹಾಯದಿಂದ ಜನರನ್ನು ವಂಚಿಸುತ್ತಿರುವುದು ಕಂಡು ಬಂದಿದೆ ಹೀಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow