ದೇವರಿಗೆ ಪೂಜೆ ವೇಳೆ ಮಹಿಳೆಯರು ಈ ತಪ್ಪು ಮಾಡಲೇಬಾರದು! ಅನಿಷ್ಟ ವಕ್ಕರಿಸಬಹುದು!

ಡಿಸೆಂಬರ್ 4, 2024 - 07:26
 0  10
ದೇವರಿಗೆ ಪೂಜೆ ವೇಳೆ  ಮಹಿಳೆಯರು ಈ ತಪ್ಪು ಮಾಡಲೇಬಾರದು! ಅನಿಷ್ಟ ವಕ್ಕರಿಸಬಹುದು!

ಹಿಂದೂ ಧರ್ಮದಲ್ಲಿ, ಪೂಜೆಯ ವಿಧಿ - ವಿಧಾನಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಹಿಳೆಯರಿಗೂ ನೀಡಲಾಗಿದೆ. ಈ ನಿಯಮಗಳನ್ನು ಅನುಸರಿಸದಿದ್ದರೆ, ಪೂಜೆಯ ಮಂಗಳಕರ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ.

ಅದರಲ್ಲೂ ಮಹಿಳೆಯರು ದೇವರ ಪೂಜೆ ಮಾಡುವುದಕ್ಕೆ ಕೆಲವೊಂದು ನಿಯಮಗಳಿವೆ. ಆ ನಿಯಮಗಳಾವುವು..? ಮಹಿಳೆಯರು ದೇವರ ಪೂಜೆಯನ್ನು ಹೇಗೆ ಮಾಡಬೇಕು..? ಮಹಿಳೆಯರು ದೇವರ ಪೂಜೆ ಮಾಡುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು..? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

ಆಂಜನೇಯ ಸ್ವಾಮಿಯನ್ನು ಪೂಜಿಸುವಾಗ, ಮಹಿಳೆಯರು ಹನುಮಂತನ ವಿಗ್ರಹವನ್ನು ಮುಟ್ಟಬಾರದು ಮತ್ತು ಅವರು ಬಜರಂಗಬಲಿಗೆ ಸಿಂಧೂರವನ್ನು ಅರ್ಪಿಸಬಾರದು. ವಾಸ್ತವವಾಗಿ, ಹನುಮಂತನು ಬ್ರಹ್ಮಚಾರಿಯಾಗಿದ್ದಾನೆ. ಅದಕ್ಕಾಗಿಯೇ ಧರ್ಮಗ್ರಂಥಗಳಲ್ಲಿ ಮಹಿಳೆಯರು ಅವನನ್ನು ಮುಟ್ಟಬಾರದು ಎಂದು ಹೇಳಲಾಗಿದೆ. ಒಂದು ವೇಲೆ ಮಹಿಳೆಯರು ಹನುಮಂತನ ವಿಗ್ರಹವನ್ನು ಸ್ಪರ್ಶಿಸಿದರೆ ಅವರು ಪಾಪದ ಪಾಲುದಾರರಾಗುತ್ತಾರೆ.

ಒಂದು ವೇಳೆ ಮಹಿಳೆಯರಿಗೆ ಋತುಚಕ್ರ ಇದ್ದಲ್ಲಿ ಯಾವುದೇ ದೇವರನ್ನು ಮುಟ್ಟಬಾರದು. ಹಿಂದೂ ಧರ್ಮದಲ್ಲಿ, ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು ಮತ್ತು ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ ಈ ಕಾರಣದಿಂದ ಋತುಚಕ್ರದ ಸಮಯದಲ್ಲಿ ಮಹಿಳೆಯರು ದೇವರ ವಿಗ್ರಹಗಳನ್ನು ಮುಟ್ಟಬಾರದು.

ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ. ಆದ್ದರಿಂದ ಸ್ನಾನ ಮಾಡದೆ ದೇವಸ್ಥಾನದಲ್ಲಿರುವ ಅಥವಾ ದೇವರ ಕೋಣೆಯಲ್ಲಿನ ದೇವರ ಮೂರ್ತಿಗಳನ್ನು ಮುಟ್ಟಬಾರದು. ಅವರು ಯಾವಾಗಲೂ ಶುದ್ಧವಾದ ನಂತರ ದೇವಾಲಯವನ್ನು ಪ್ರವೇಶಿಸಬೇಕು ಮತ್ತು ದೇವರ ವಿಗ್ರಹಗಳನ್ನು ಸ್ಪರ್ಶಿಸಬೇಕು.

ಪೂಜೆಯ ಸಮಯದಲ್ಲಿ ಮಹಿಳೆಯರು ತೆಂಗಿನಕಾಯಿ ಒಡೆಯಬಾರದು. ತೆಂಗಿನಕಾಯಿಯನ್ನು ಬೀಜ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ, ಅದರಿಂದ ಹೊಸ ಮರವು ರೂಪುಗೊಳ್ಳುತ್ತದೆ, ಅದೇ ರೀತಿ ಮಹಿಳೆಯರು ಒಂದು ರೀತಿಯಲ್ಲಿ ಬೀಜದಂತೆ ಅವರು ಕೂಡ ಒಂದು ಹೊಸ ಜೀವಕ್ಕೆ ಜನ್ಮವನ್ನು ನೀಡುತ್ತಾರೆ. ಸಂತಾನವನ್ನು ಅಭಿವೃದ್ದಿಪಡಿಸುತ್ತಾರೆ. ಅದಕ್ಕಾಗಿಯೇ ಮಹಿಳೆಯರು ಪೂಜೆಯ ಈ ನಿಯಮವನ್ನು ನಿರ್ಲಕ್ಷಿಸಿದರೆ, ಮಕ್ಕಳ ಕಡೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು

ಹೆಂಗಸರು ತಲೆ ಮುಚ್ಚಿಕೊಳ್ಳದೆ ಪೂಜೆ ಮಾಡಬಾರದು. ಮಹಿಳೆಯರು ತಲೆಯನ್ನು ಮುಚ್ಚಿಕೊಳ್ಳುವುದರಿಂದ ಅವರಲ್ಲಿನ ಧನಾತ್ಮಕ ಶಕ್ತಿ ಹೊರಹೋಗುವುದಿಲ್ಲ. ಶಾಸ್ತ್ರಗಳ ಪ್ರಕಾರ ಪೂಜೆಯ ಸಮಯದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಅವರ ಗಮನ ಬೇರೆಡೆಗೆ ಹೋಗದೆ, ಕೇವಲ ಪೂಜೆಯ ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತದೆ.

ಮಹಿಳೆಯರು ಶನಿ ದೇವರನ್ನು ಪೂಜಿಸುವಾಗ ಶನಿ ದೇವನನ್ನು ಸ್ಪರ್ಶಿಸಬಾರದು ಅಥವಾ ಶನಿ ದೇವರಿಗೆ ಎಣ್ಣೆಯನ್ನು ಅರ್ಪಿಸಬಾರದು. ಶನಿ ಪೂಜೆಯಲ್ಲಿ ನೀವು ಈ ತಪ್ಪುಗಳನ್ನು ಮಾಡಿದರೆ ಶನಿ ದೋಷವನ್ನು ಎದುರಿಸಬೇಕಾಗುತ್ತದೆ ಮತ್ತು ಜೀವನದಲ್ಲಿ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow