ನಾಲಿಗೆಯಲ್ಲ, ಜೇಬು ಸುಡಲಿದೆ ಬಿಸಿ ಕಾಫಿ! ದರ ದಿಢೀರ್ ಏರಿಕೆ!

ಬೆಂಗಳೂರು:- ಹೇಳಿ ಕೇಳಿ ಎಲ್ಲ ಕಡೆ ಮಳೆ! ಈಗಲೇ ಚಳಿ ಕಾಡುತ್ತಿರುವ ವಾತಾವರಣದಲ್ಲಿ ಗಂಟೆಗೊಂದು ಕಪ್ ಕಾಫಿ ಕುಡಿಯಬೇಕು ಎಂಬ ಆಸೆಯಾಗದೆ ಇರದು. ಆದರೆ ಹುಷಾರು! ಈ ಬಿಸಿ ಕಾಫಿ ನಿಮ್ಮ ನಾಲಿಗೆಯನ್ನಷ್ಟೇ ಅಲ್ಲ, ಜೇಬನ್ನೂ ಸುಡುತ್ತದೆ. ಏಕೆಂದರೆ ಕಾಫಿ ಬೆಲೆ ವಿಪರೀತ ಏರಿಕೆ ಕಂಡಿದೆ.
ಹೌದು, ಹಾಲಿನ ಬೆಲೆ ಏರಿಕೆ ನಂತರ ಕರ್ನಾಟಕದಲ್ಲಿ ಅನೇಕ ಹೋಟೆಲ್ಗಳು ಕಾಫಿ ಹಾಗೂ ಚಹಾ ದರ ಏರಿಕೆ ಮಾಡಿವೆ. ಇದೀಗ ಕಾಫಿ ಪುಡಿಯ ದರಗಳು ಕೂಡ ಹೆಚ್ಚಾಗುತ್ತಿದ್ದು, ಪರಿಣಾಮವಾಗಿ ಒಂದು ಕಪ್ಪು ಕಾಫಿ ಬೆಲೆ ಐದು ರೂಪಾಯಿ ಎಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರೋಸ್ಟರ್ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ. ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳ ಸದಸ್ಯರು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬೆಲೆ ಏರಿಕೆ ಅನಿವಾರ್ಯ. ಪ್ರತಿ ಕೆಜಿ ಕಾಫಿ ಪುಡಿಯ ಬೆಲೆ 800-850 ರೂ.ಗಳಿಂದ 1,000-1,100 ರೂ.ಗಳಿಗೆ ಏರಿಕೆಯಾದಾಗ, ಕಾಫಿ ಮಾರಾಟಗಾರರಿಗೆ ಒಂದು ಕಪ್ ಕಾಫಿಯ ಬೆಲೆಯನ್ನು ಸುಮಾರು 5 ರೂ.ಗಳಷ್ಟು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಚಿಕೋರಿ ಮಿಶ್ರಣವು ಗುಣಮಟ್ಟ ಮತ್ತು ಸುವಾಸನೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.ಕಾಫಿ ಬೆಲೆ ನಿರಂತರವಾಗಿ ಹೆಚ್ಚುತ್ತಿವೆ. 2024 ರ ಜನವರಿಯಿಂದ ರೋಬಸ್ಟಾ ಬೆಲೆಗಳು ಕೆಜಿಗೆ 200 ರೂ.ಗಳಿಂದ 520 ರೂ.ಗಳಿಗೆ ಏರಿಕೆಯಾಗಿದೆ. ಅಲ್ಲದೆ, 2024 ರ ಜನವರಿ ಮತ್ತು 2025 ರ ಫೆಬ್ರವರಿ ನಡುವೆ ಅರೇಬಿಕಾ ಕಾಫಿ ಬೆಲೆ ಕೆಜಿಗೆ 290 ರೂ.ಗಳಿಂದ 750 ರೂ.ಗಳಿಗೆ ಏರಿಕೆಯಾಗಿದೆ.
ಹೌದು, ಹಾಲಿನ ಬೆಲೆ ಏರಿಕೆ ನಂತರ ಕರ್ನಾಟಕದಲ್ಲಿ ಅನೇಕ ಹೋಟೆಲ್ಗಳು ಕಾಫಿ ಹಾಗೂ ಚಹಾ ದರ ಏರಿಕೆ ಮಾಡಿವೆ. ಇದೀಗ ಕಾಫಿ ಪುಡಿಯ ದರಗಳು ಕೂಡ ಹೆಚ್ಚಾಗುತ್ತಿದ್ದು, ಪರಿಣಾಮವಾಗಿ ಒಂದು ಕಪ್ಪು ಕಾಫಿ ಬೆಲೆ ಐದು ರೂಪಾಯಿ ಎಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರೋಸ್ಟರ್ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ.
ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳ ಸದಸ್ಯರು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬೆಲೆ ಏರಿಕೆ ಅನಿವಾರ್ಯ. ಪ್ರತಿ ಕೆಜಿ ಕಾಫಿ ಪುಡಿಯ ಬೆಲೆ 800-850 ರೂ.ಗಳಿಂದ 1,000-1,100 ರೂ.ಗಳಿಗೆ ಏರಿಕೆಯಾದಾಗ, ಕಾಫಿ ಮಾರಾಟಗಾರರಿಗೆ ಒಂದು ಕಪ್ ಕಾಫಿಯ ಬೆಲೆಯನ್ನು ಸುಮಾರು 5 ರೂ.ಗಳಷ್ಟು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಚಿಕೋರಿ ಮಿಶ್ರಣವು ಗುಣಮಟ್ಟ ಮತ್ತು ಸುವಾಸನೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.ಕಾಫಿ ಬೆಲೆ ನಿರಂತರವಾಗಿ ಹೆಚ್ಚುತ್ತಿವೆ. 2024 ರ ಜನವರಿಯಿಂದ ರೋಬಸ್ಟಾ ಬೆಲೆಗಳು ಕೆಜಿಗೆ 200 ರೂ.ಗಳಿಂದ 520 ರೂ.ಗಳಿಗೆ ಏರಿಕೆಯಾಗಿದೆ. ಅಲ್ಲದೆ, 2024 ರ ಜನವರಿ ಮತ್ತು 2025 ರ ಫೆಬ್ರವರಿ ನಡುವೆ ಅರೇಬಿಕಾ ಕಾಫಿ ಬೆಲೆ ಕೆಜಿಗೆ 290 ರೂ.ಗಳಿಂದ 750 ರೂ.ಗಳಿಗೆ ಏರಿಕೆಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






