ನೆನೆಸಿದ ಕರಿಬೇವು ನೀರು ಕುಡಿದರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ಆಗಸ್ಟ್ 30, 2025 - 07:01
 0  14
ನೆನೆಸಿದ ಕರಿಬೇವು ನೀರು ಕುಡಿದರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ಹೊಟ್ಟೆಯ ಸಮಸ್ಯೆಗಳಿಗೆ ಹಲವು ಔಷಧಿಗಳಿವೆ. ಆದರೆ ಕೆಲವು ನೈಸರ್ಗಿಕ ಮತ್ತು ಸರಳ ಪರಿಹಾರಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯಕವಾಗಿವೆ. ಕರಿಬೇವಿನ ಎಲೆಯನ್ನು ಪ್ರತಿದಿನ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.

ನಾವು ಬೆಳಗ್ಗೆ ಎದ್ದಾಗ ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯವು ಅವಲಂಬಿತವಾಗಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹೆಚ್ಚಿನ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ಕರಿಬೇವಿನ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಮತ್ತಷ್ಟು ಲಾಭಗಳನ್ನು ನಾವು ಕಂಡುಕೊಳ್ಳಬಹುದು.ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚವಿ ದ್ದಂತೆ!ಹಲವು ಆಯಾಮಗಳಲ್ಲಿ ಇದರಿಂದ ನಾವು ಆರೋಗ್ಯಕ್ಕೆ ಸಹಕಾರವನ್ನು ನಿರೀಕ್ಷಿಸಬಹುದು. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ.

ಬಿಪಿ ಮತ್ತು ಸಕ್ಕರೆ ಕಾಯಿಲೆ ಅಣ್ಣ ತಮ್ಮ ಇದ್ದಂತೆ. ಮನೆಯಲ್ಲಿ ಒಬ್ಬರಿಗೆ ಬಿಪಿ ಇದ್ದರೆ ಇನ್ನೊಬ್ಬರಿಗೆ ಶುಗರ್ ಇರುತ್ತದೆ. ಆದರೆ ಇವೆರಡಕ್ಕೂ ರಾಮಬಾಣ ಕರಿಬೇವಿನ ಸೊಪ್ಪು!

ಕರಿಬೇವಿನ ಎಲೆಗಳ ನೀರನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಅದರಲ್ಲಿರುವ ನಾರಿನ ಅಂಶ ನಿಮಗೆ ಸಿಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸಿ ನೀವು ಸೇವಿಸಿದ ಆಹಾರದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಬೇಗನೆ ಬಿಡುಗಡೆ ಮಾಡುವುದಿಲ್ಲ. ಇದರಿಂದ ನಿಮ್ಮ ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪುವುದಿಲ್ಲ.

ಕರಿಬೇವಿನ ಎಲೆಗಳು ನಮ್ಮ ದೇಹದಲ್ಲಿ ಆಕ್ಸಿಡೆಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ. ನಮ್ಮ ಲಿವರ್ ಭಾಗವನ್ನು ರಕ್ಷಿಸುತ್ತವೆ. ವಿಷಕಾರಿ ಅಂಶಗಳನ್ನು ದೂರ ಮಾಡುವುದರ ಜೊತೆಗೆ ಅವುಗಳ ಆಂಟಿ ಆಕ್ಸಿಡೆಂಟ್ ಅಂಶಗಳು ಲಿವರ್ ಭಾಗವನ್ನು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತವೆ.

ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ವಾಂತಿ, ತಲೆ ನೋವು, ವಾಕರಿಕೆ ಬಂದಂತೆ ಆಗುವುದು ಇತ್ಯಾದಿ ಅಸ್ವಸ್ಥತೆಗಳು ಕಾಣಿಸುತ್ತಿರುತ್ತವೆ. ಗರ್ಭಿಣಿಯರಲ್ಲಿ ಈ ರೀತಿ ಆಗುವುದು ಸಹಜ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ರಾಮಬಾಣವಾಗಿ ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯು ವುದು ಉತ್ತಮ ಎಂದು ತಿಳಿದವರು ಹೇಳುತ್ತಾರೆ.

ನಮ್ಮ ದೇಹಕ್ಕೆ ವಿಶೇಷವಾಗಿ ಜೀವಕೋಶಗಳ ಕಾರ್ಯ ಚಟುವಟಿಕೆಗೆ ಅಗತ್ಯವಾಗಿ ಬೇಕಾಗಿರುವ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಕರಿಬೇವಿನ ಎಲೆಗಳು ನಮಗೆ ಒದಗಿಸುತ್ತವೆ.

ಇದರಿಂದ ಹೃದಯದ ಕಾಯಿಲೆಗಳು ಮತ್ತು ಹೃದಯ ರಕ್ತನಾಳದ ಸಮಸ್ಯೆಗಳು ದೂರವಾಗುತ್ತವೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಇದು ಸಾಧ್ಯವಾಗುತ್ತದೆ.​

ಕರಿಬೇವಿನ ಎಲೆಗಳ ರಸ ಅಥವಾ ನೀರು ಸೇವನೆ ಪ್ರತಿದಿನ ನಿಮ್ಮ ಅಭ್ಯಾಸ ವಾಗಿದ್ದರೆ, ನಿಮ್ಮ ದೇಹದ ತೂಕವನ್ನು ಕರಗಿಸಲು ನೀವು ಅಷ್ಟೊಂದು ಕಷ್ಟಪಡಬೇಕಾಗಿಲ್ಲ.
ಏಕೆಂದರೆ ಇದರಲ್ಲಿ ನಿಮ್ಮ ದೇಹದಲ್ಲಿ ಬೇಡದ ಕೊಬ್ಬು ಹಾಗೂ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿದೆ. ಜೊತೆಗೆ ನಿಮ್ಮ ದೇಹವನ್ನು ಇದು ಒಳಗಿನಿಂದಲೇ ಸ್ವಚ್ಛ ಮಾಡುತ್ತದೆ. ಹೀಗಾಗಿ ಬಹಳ ಬೇಗನೆ ನೀವು ಅಂದುಕೊಂಡ ತೂಕಕ್ಕೆ ತಲುಪ ಬಹುದು.

ಕರಿಬೇವಿನ ಎಲೆಗಳು ಸಾಮಾನ್ಯವಾಗಿ ನಮ್ಮ ದೇಹಕ್ಕೆ ತಂಪಿನ ವಾತಾವರಣವನ್ನು ಉಂಟು ಮಾಡುತ್ತವೆ. ಕಣ್ಣುಗಳ ದೃಷ್ಟಿ ವೃದ್ಧಿಸು ವಲ್ಲಿ ಕೂಡ ಇದು ತುಂಬಾ ಪ್ರಯೋಜನಕಾರಿ ಆಗಿರುತ್ತದೆ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಪ್ರಮಾಣ ಹೇರಳವಾಗಿದ್ದು, ಕಣ್ಣುಗಳನ್ನು ದೀರ್ಘಕಾಲ ದೃಷ್ಟಿ ದೋಷ ಬರದಂತೆ ಕಾಪಾಡಲು ಇದು ನೆರವಾಗುತ್ತದೆ ಎಂದು ಹೇಳಲಾಗಿದೆ.

ಕರಿಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಆಗಾಗ ತಲೆ ಕೂದಲಿಗೆ ಹಚ್ಚಿ ಕೊಳ್ಳುವುದರಿಂದ ತಲೆ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾ ಗುತ್ತದೆ ಎಂದು ಬಲವಾಗಿ ನಂಬಲಾಗಿದೆ. ಏಕೆಂದರೆ ಇದರಲ್ಲಿ ತಲೆ ಕೂದಲಿನ ಬೇರುಗಳಿಗೆ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ಮತ್ತು ಬೀಟಾ ಕ್ಯಾರೋಟಿನ್ ಹೆಚ್ಚಾಗಿದೆ. ಇದರಿಂದ ತಲೆ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗಿ ತಲೆ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow