ಹೆಂಗಸರಿಲ್ಲದೇ ಮಗು ಹೆರಬಹುದು: ಜೀವಂತ ಕಂದಗೆ ಜನ್ಮ ನೀಡಲಿದೆ ರೋಬೋಟ್.!
ವಿಶ್ವದಲ್ಲಿ ವಿಜ್ಞಾನ ಅದ್ಭುತ ಪ್ರಗತಿ ಸಾಧಿಸಿ, ಅಚ್ಚರಿ ಪಡುವಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಜಗತ್ತೆ ಬೆಚ್ಚಿ ಬೀಳಿಸಿದ ಸಂಶೋಧನೆ ಹೊರಬಿದ್ದಿದ್ದು, ಮಾನವನ ಮಗುವಿಗೆ ಜನ್ಮ ನೀಡುವ ರೋಬೋಟ್ ಅಭಿವೃದ್ಧಿ ಮಾಡಲಾಗುತ್ತಿದೆ.
ಮಕ್ಕಳ ಪಡೆಯಲು ಇನ್ಮುಂದೆ ಹೆರಿಗೆ ನೋವು ಅನುಭವಿಸಬೇಕಿಲ್ಲ, ಐವಿಎಫ್ ತಂತ್ರಜ್ಞಾನ, ಸರೋಗಸಿ ತಾಯಿ ಹುಡುಕಬೇಕಿಲ್ಲ. ಚೀನಾ ವಿಜ್ಞಾನಿಗಳು ವಿಶ್ವದ ಮೊದಲ ಫಸ್ಟ್ ಜನರೇಶನ್ ರೋಬೋಟ್ ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ಅಂದರೆ ಈ ರೋಬೋಟ್ ಮಾನವನ ಮಗುವಿಗೆ ಜನ್ಮ ನೀಡಲಿದೆ. ಗರ್ಭಿಣಿಯಿಂದ ಮಗುವಿಗೆ ಜನ್ಮ ನೀಡುವವರೆಗೆ ಎಲ್ಲಾ ಪ್ರಕ್ರಿಯೆಗಳು ರೋಬೋಟ್ ನಿರ್ವಹಿಸಲಿದೆ. ತಾಯಿ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ, ಜನನ ಎಲ್ಲಾ ಪ್ರಕ್ರಿಯೆಗಳು ಈ ರೋಬೋಟ್ ನಿರ್ವಹಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪುರುಷನ ಸಂಪರ್ಕವಿಲ್ಲದೇ ಐವಿಎಫ್ ಮೂಲಕ ಸಂತಾನೋತ್ಪತ್ತಿ ಸಾಧಿಸಿದ ವಿಜ್ಞಾನಿಗಳಿಗೆ ಈಗ ತಾಯಂದಿರ ಅಗತ್ಯವೇ ಇಲ್ಲದೇ ಮಗು ಹುಟ್ಟಿಸಲು ಮುಂದಾಗಿದ್ದಾರೆ. ಇನ್ನು ಮುಂದೆ ತಾಯಂದಿರಿಂದ ಅಲ್ಲ, ಬದಲಾಗಿ ಯಂತ್ರಗಳಿಂದ ಜನಿಸುವ ಜಗತ್ತು ಕಲ್ಪಿಸಿಕೊಳ್ಳಿ. ಚೀನಿ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ಗರ್ಭಧಾರಣೆಯ ರೋಬೋಟ್ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.
ವಿಜ್ಞಾನಿ ಡಾ.ಜಾಂಗ್ ಕಿಫೆಂಗ್ ನೇತೃತ್ವದ ಗುವಾಂಗ್ಝೌ ಮೂಲದ ಕೈವಾ ಟೆಕ್ನಾಲಜಿ ಇಂಥದ್ದೊಂದು ಯೋಜನೆಗೆ ಕೈ ಹಾಕಿದೆ. ಹುಮನಾಯ್ಡ್ ರೋಬೋಟ್ನ ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ ಸಿದ್ಧವಾಗುತ್ತಿದೆ ಎಂಬ ಮಾಹಿತಿಯನ್ನು ವಿಜ್ಞಾನಿ ಡಾ.ಜಾಂಗ್ ನೀಡಿದ್ದಾರೆ.
ರೊಬೊಟ್ನ ಕೃತಕ ಗರ್ಭದಲ್ಲಿ ಕೃತಕ ಆಮ್ನಿಯೊಟಿಕ್ ದ್ರವದಲ್ಲಿ ಭ್ರೂಣ ಸಿದ್ಧವಾಗಲಿದೆ. ರೋಬೋಟ್ ನ ಹೊಟ್ಟೆಯಲ್ಲಿ ಗರ್ಭಾಶಯದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಭ್ರೂಣವನ್ನು ಬಾಹ್ಯ ಆಘಾತಗಳಿಂದ ರಕ್ಷಿಸುವ ದ್ರವವಾಗಿದೆ. ಭ್ರೂಣಕ್ಕೆ ಸ್ಥಿರ ತಾಪಮಾನ ನೀಡಿ, ಅದರ ಬೆಳವಣಿಗೆಗೂ ಸಹಾಯ ಮಾಡುತ್ತದೆ. ರೊಬೊಟ್ ಗರ್ಭಾಶಯಕ್ಕೆ ಪೋಷಕಾಂಶ ಮತ್ತು ಆಮ್ಲಜನಕವನ್ನು ಹೊಕ್ಕುಳಬಳ್ಳಿಯಂತೆ ಕೊಳವೆಯ ಮೂಲಕ ಪೂರೈಸಲಾಗುತ್ತದೆ ಅಂತೆ.
ಬೀಜಿಂಗ್ನಲ್ಲಿ ನಡೆದ ವಿಶ್ವ ರೋಬೋಟ್ನ ಸಮ್ಮೇಳನದಲ್ಲಿ ಮಾಹಿತಿ ನೀಡಿರುವ ವಿಜ್ಞಾನಿ ಡಾ.ಜಾಂಗ್, 2026ರ ವೇಳೆಗೆ ಮೂಲ ಮಾದರಿ ಬಿಡುಗಡೆ ಮಾಡುತ್ತೇವೆ ಅಂತ ಘೋಷಿಸಿದ್ದಾರೆ. ಇದಕ್ಕೆ ಬೆಲೆಯೂ ನಿಗದಿ ಮಾಡಿದ್ದಾರೆ. ಇದರ ಬೆಲೆ 100,000 ಯುವಾನ್ ಅಂದರೆ 12 ಲಕ್ಷ ರೂಪಾಯಿ ಇರಲಿದೆ.
ನಿಮ್ಮ ಪ್ರತಿಕ್ರಿಯೆ ಏನು?