ಪಪ್ಪಾಯಿ ಉಪಯೋಗ ತಿಳಿದಿದ್ದೀರಾ? ಇದು ಆರೋಗ್ಯಕ್ಕೆ ರಾಮಬಾಣ!
ಮಳೆಗಾಲವಿರಲಿ, ಚಳಿಗಾಲವಿರಲಿ ಅಥವಾ ಬೇಸಿಗೆಯಿರಲಿ ಪಪ್ಪಾಯಿ ಎಲ್ಲಾ ಸೀಸನ್ನಲ್ಲಿಯೂ ಸಿಗುತ್ತದೆ. ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದ್ದು, ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಈ ಹಣ್ಣನ್ನು ತಿನ್ನಬಹುದು.. ಈ ಹಣ್ಣು ಸಾಕಷ್ಟು ರೋಗಗಳಿಗೆ ರಾಮಬಾಣವಾಗಿದ್ದು, ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಪಪ್ಪಾಯ ಅಂದರೆ ಪರಂಗಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಇದರಲ್ಲಿರುವ ಪೋಟ್ಯಾಷಿಯಂ ಅಂಶದಿಂದಾಗಿ ಸಂಧಿವಾತ ರೋಗ ನಿವಾರಣೆಗೆ ಸಹಕಾರಿ. ಉತ್ತಮ ಜೀರ್ಣ ಶಕ್ತಿಯನ್ನು ಮತ್ತು ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
ಇದರಲ್ಲಿರುವ “ಇ” ವಿಟಮಿನ್ ಸೌಂದರ್ಯ ವರ್ಧಕ ಅಂಶ ಹೊಂದಿದ್ದು, ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ. ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೋಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪ್ರೋಟಿನ್ 2.9 ಗ್ರಾಂ., ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ. ಪಪ್ಪಾಯ ಹಣ್ಣು ಸೇವನೆಯಿಂದ ಮನುಷ್ಯನ ಶರೀರಕ್ಕೆ ಈ ಮೇಲಿನ ಎಲ್ಲಾ ಲಾಭಾಂಶಗಳು ದೊರೆಯುತ್ತವೆ.
ಪಪ್ಪಾಯಿ ಅಥವಾ ಪರಂಗಿ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಣಸಿಗುವ ಹಾಗೂ ಎಲ್ಲಾ ಋತುಗಳಲ್ಲಿ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ. ಸಾಮಾನ್ಯ ಪಪ್ಪಾಯವು ಆರೋಗ್ಯ ಪ್ರಯೋಜನಗಳೊಂದಿಗೆ ತುಂಬಿದ ಹಣ್ಣಾಗಿದೆ. ಇದು ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅತ್ಯಂತ ಪೌಷ್ಟಿಕ ಹಣ್ಣು ಎಂದು ನಂಬಲಾಗಿದೆ. ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದು ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಯನ್ನು ಹೊಂದಿದೆ ಮತ್ತು ಜೀವಸತ್ವಗಳು ಎ ಮತ್ತು ಬಿ ಗಳ ಉತ್ತಮ ಮೂಲವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?