ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಲು ಆರ್‌ಎಸ್‌ಎಸ್‌ ಸಭೆ ಮಾಡಿದ್ದಾರೆ: ಸಂತೋಷ್ ಲಾಡ್

ಅಕ್ಟೋಬರ್ 9, 2024 - 16:09
ಅಕ್ಟೋಬರ್ 9, 2024 - 16:12
 0  9
ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಲು ಆರ್‌ಎಸ್‌ಎಸ್‌ ಸಭೆ ಮಾಡಿದ್ದಾರೆ: ಸಂತೋಷ್ ಲಾಡ್

ಬೀದರ್: ಪ್ರಧಾನಿ ಮೋದಿಯನ್ನು ಬದಲಾವಣೆ ಮಾಡಲು ಆರ್‌ಎಸ್‌ಎಸ್‌ ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಆರ್‌ಎಸ್‌ಎಸ್ & ಬಿಜೆಪಿ ಮಧ್ಯೆ ಬಿರುಕು ಇದೆ. ಪ್ರಧಾನಿ ಮೋದಿ ಆರ್‌ಎಸ್‌ಎಸ್‌ನವರ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ಇದೆ. ಆದ್ದರಿಂದ  ಶೀಘ್ರದಲ್ಲಿಯೇ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂದು ಹೇಳಿದರು.

ಕೇಂದ್ರದಲ್ಲೂ 30-40 ಸೀಟು ಮಾತ್ರ ವ್ಯತ್ಯಾಸ ಇವೆ. ಕೇಂದ್ರ ಸರ್ಕಾರ ಬೀಳುತ್ತದೆ ಎಂಬ ಸಂದೇಹ ನನಗಿದೆ. ಮೋದಿ ಬೀಳಿಸಲಿಕ್ಕೆ ಆರ್‌ಎಸ್‌ಎಸ್‌ನವರಿಗೆ ಪವರ್ ಇಲ್ವಾ? ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ 5 ವರ್ಷ ಅಧಿಕಾರ ನಡೆಸುತ್ತದೆ. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow