ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ ಬ್ರೇಕ್: ಗಂಟೆಗೆ 5,687 ನಿಯಮ ಉಲ್ಲಂಘನೆ, ದಾಖಲಾದ ಪ್ರಕರಣ ಎಷ್ಟು!?

ಸೆಪ್ಟೆಂಬರ್ 28, 2024 - 21:05
 0  9
ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ ಬ್ರೇಕ್: ಗಂಟೆಗೆ 5,687 ನಿಯಮ ಉಲ್ಲಂಘನೆ, ದಾಖಲಾದ ಪ್ರಕರಣ ಎಷ್ಟು!?

ಬೆಂಗಳೂರು:- ಇತ್ತೀಚೆಗಿನ ದಿನಗಳಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಡ್ರೈವ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆದರೆ ಇದೀಗ ಒನ್ ವೇ, ನೋ ಎಂಟ್ರಿ ನಿಯಮ ಉಲ್ಲಂಘನೆ ವಿಚಾರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ

ಸಂಚಾರ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದು, ಸಂಚಾರ ಪೊಲೀಸ್ ಇಲಾಖೆಯು ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ಮೇ ನಿಂದ ಸೆಪ್ಟೆಂಬರ್ ವರೆಗೆ ಪ್ರತಿ ಗಂಟೆಗೆ ಎಐ ಆಧಾರಿತ ಕ್ಯಾಮೆರಾಗಳ ಮೂಲಕ ಸೆರೆಹಿಡಿಯಲಾಗಿದ್ದು, ಬೆಂಗಳೂರಿನಲ್ಲಿ 5,687 ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಿಸಲಾಗಿದೆ ಎಂದರು. 

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ನಡೆಸಿದ 25 ನೇ SAFE ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಮೇ 1ರಿಂದ ಸೆಪ್ಟೆಂಬರ್ 30 ರವರೆಗೆ, ಈ ಸುಧಾರಿತ ಕಣ್ಣಾವಲು ವ್ಯವಸ್ಥೆಗಳು ಒಟ್ಟು 8 ಮಿಲಿಯನ್ ಸಂಚಾರ ಉಲ್ಲಂಘನೆಗಳನ್ನು ದಾಖಲಿಸಿದೆ. ದಿನಕ್ಕೆ ಸರಾಸರಿ 57,942 ಉಲ್ಲಂಘನೆಗಳು ಅಥವಾ ಪ್ರತಿ ಜಂಕ್ಷನ್‌ನಲ್ಲಿ 789 ಉಲ್ಲಂಘನೆಗಳಾಗಿವೆ. ಬೆಳಗ್ಗಿನ ವೇಳೆ 8 ರಿಂದ 9 ಗಂಟೆ ಸುಮಾರಿಗೆ 9,134 ಮತ್ತು 8,265 ನಿಯಮ ಉಲ್ಲಂಘನೆಗಳು ಪ್ರಕರಣಗಳು ದಾಖಲಾಗಿದೆ. ಪ್ರತಿನಿತ್ಯ ರಾಂಗ್ ವೇ ಯಲ್ಲಿ ವಾಹನ ಚಾಲನೆ ಮಾಡುವ ಪ್ರಕರಣಗಳ ಸಂಖ್ಯೆಯು 2300 ಏರಿಕೆಯಾಗಿದೆ ಎಂದು ಅಂಕಿಅಂಶಗಳಲ್ಲಿ ಬಹಿರಂಗವಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow